fbpx

ಕ.ಸಾ.ಪ ವತಿಯಿಂದ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ..

ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಭಾಗಮಂಡಲ ಇವರ ಆಶ್ರಯದಲ್ಲಿ ಭಾಗಮಂಡಲದ ಕೆ.ವಿ.ಜಿ ಐ.ಟಿ‌.ಐ ಸಭಾಂಗಣದಲ್ಲಿ ಎಸ್‌.ಎಸ್‌.ಎಲ್.ಸಿ ಮತ್ತು ಪಿ.ಯು.ಸಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಭಾಗಮಂಡಲ ಹೋಬಳಿಗೆ ಒಳಪಡುವ ಒಟ್ಟು 16 ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚೇರಂಬಾಣೆ ಶಾಲೆಯ ಪ್ರಕೃತಿ ಟಿ.ವಿ 125ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀಧರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ‌.ಕೂಡಕಂಡಿ ದಯಾನಂದ್, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಎನ್.ಕೆ ಜಾನಕಿ, ವಾಜಪೇಯಿ ಶಾಲೆಯ ಶಿಕ್ಷಕರಾದ ಮುತ್ತುರಾಜ್, ದೇವಂಗೋಡಿ ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುದುಕುಳಿ ಕಿಶೋರ್ ಕಾರ್ಯಕ್ರಮವನ್ನು ನಿರೂಪಿಸಿಸರು. ನಿಡ್ಯಮಲೆ ಚಲನ್, ಕುದುಕುಳಿ ಇಂದಿರಾ ಭರತ್ ಮುಂತಾದವರು ಉಪಸ್ಥಿರಿದ್ದರು.

✍🏻ವಿನೋದ್ ಮೂಡಗದ್ದೆ

error: Content is protected !!