ಕ್ಷಮಿಸು ಪಾಕಿಸ್ತಾನ.. ಚಿನ್ನ ಗೆದ್ದ ನೀರಜ್ ನನಗೆ ಪ್ರೇರಣೆ.! ಎಂದು ಪಾಕ್ ಅಥ್ಲೀಟ್ ಟ್ವೀಟ್

ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದ ಕಾರಣ ಇಂದು ದೇಶದ ಪಾಲಿಗೆ ಸಂಭ್ರಮದ ಕ್ಷಣ. ಇಡೀ ದೇಶಾದ್ಯಂತ ನೀರಜ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ನೀರಜ್ ಎದುರಾಳಿ ಪಾಕಿಸ್ತಾನದ ಜಾವಲಿನ್ ಥ್ರೋ ಅಥ್ಲೀಟ್ ಅರ್ಷದ್ ನದೀಮ್ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

‘ಜಾವಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ನೀರಜ್ ಚೋಪ್ರಾ ನನಗೆ ಪ್ರೇರಣೆ. ಇವರ ಸಾಧನೆ ಅವಿಸ್ಮರಣೀಯ. ಚಿನ್ನ ಗೆದ್ದ ನೀರಜ್ ಅವರಿಗೆ ಅಭಿನಂದನೆಗಳು. ಕ್ಷಮಿಸು ಪಾಕಿಸ್ತಾನ, ನಿಮಗಾಗಿ ನಾನು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ’ ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ ಅರ್ಷದ್ ನದೀಮ್.