ಕ್ಲೋರೊಪೈರಿಫೊಸ್ ರಾಸಾಯನಿಕ ಬಳಸದಂತೆ ಕಾಫಿ ಬೆಳೆಗಾರರಲ್ಲಿ ಮನವಿ

ಕಾಫಿ ಕೃಷಿಯಲ್ಲಿ ಪ್ರಮುಖ ಕೀಟಗಳಾದ ಬಿಳಿ ಕಾಂಡ ಕೊರಕ ಮತ್ತು ಕಾಯಿ ಕೊರಕ ಕೀಟಗಳಿಗೆ ಸಮಗ್ರ ಕೀಟ ನಿರ್ವಹಣೆ ಕ್ರಮಗಳಲ್ಲಿ ಕ್ಲೋರೊಪೈರಿಫೊಸ್ ಅನ್ನು ಕೀಟ ನಿರ್ವಹಣೆ ಕ್ರಮವಾಗಿ ಬಳಸಲಾಗುತ್ತಿದ್ದು , ಈಗಾಗಲೇಕ್ಲೋರೊಪೈರಿಫಾಸ್ ನಿಯಂತ್ರಿಸಲು ಕೀಟ ನಾಶಕವನ್ನು ಬಳಸಲಾಗುತ್ತಿದೆ.

ನಿಷೇಧಿಸಲ್ಪಡುವ ಕೀಟನಾಶಕಗಳ ಪಟ್ಟಿಯಲ್ಲಿ ಇದು ಒಂದಾಗಿದ್ದು ಬಳಸಲಾಗುತ್ತಿದ್ದ ಸೂಚನೆ ನೀಡಲಾಗಿದೆ, ಕ್ಲೋರೊಪೈರಿಫೊಸ್ ಮನುಷ್ಯನ ಅರೋಗ್ಯದ ಮೇಲೆ ಉಂಟು ಮಾಡುವ ದುಷ್ಪರಿಣಾಮ, ಈ ಬಗ್ಗೆ ಹಲವು ದೇಶಗಳು ರಾಸಾಯನಿಕ ಬಳಕೆಯನ್ನು ನಿಷೇಧಿಸಿವೆ ಮತ್ತು ಕಠಿಣ ನಿರ್ಬಂಧ ವಿಧಿಸಿವೆ ಹಾಗೂ ಈ ಕೀಟನಾಶಕದ ಬಳಕೆಯನ್ನು ನಿಲ್ಲಿಸಲು ಕಡಿಮೆ ಮಟ್ಟದ ಶೇಷ ಮಿತಿಗಳನ್ನು ನಿಗದಿಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಿಂದ ರಫ್ತಾದ ಕಾಫಿಯಲ್ಲಿ ಕ್ಲೋರೊಪೈರಿಫಾಸ್‌ನ ಪ್ರಮಾಣವು ಅನುಮತಿಸಲಾದ ಮಿತಿಯನ್ನು ಮೀರಿದೆ ಎಂದು ತಿಳಿಸಲಾಗಿರುತ್ತದೆ. ಈ ಬೆಳವಣಿಗೆಯು ಶೇ.೭೦ ರಷ್ಟು ರನ ಮೇಲೆ ಅವಲಂಬಿತವಾಗಿರುವ ಭಾರತದ ಕಾಫಿ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗೂ ಅದು ಭಾರತೀಯ ಕಾಫಿಯ ಗುಣಮಟ್ಟವನ್ನು ಹಾಳುಮಾಡುತ್ತಿದೆ. ಆದ್ದರಿಂದ, ಕಾಫಿ ಕೃಷಿಯ ಯಾವುದೇ ಹಂತದಲ್ಲಿ ಕ್ಲೋರೊಪೈರಿಫಾಸ್ ಅನ್ನು ಬಳಸದಿರಲು ಎಲ್ಲಾ ಕಾಫಿ ಬೆಳೆಗಾರರಲ್ಲಿ ಮನವಿ ಮಾಡಿಕೊಂಡರು.

error: Content is protected !!