ಕ್ರೈಂ

ಶ್ರೀಗಂಧ ಸಾಗಾಟ: ಬಂಧನ
ಕೊಡಗು(ಹೆಬ್ಬಾಲೆ): ಅಕ್ರಮವಾಗಿ ಶ್ರೀಗಂಧದ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಬಾಣಾವರ ಅರಣ್ಯ ವಿಭಾದ ಸಿಬ್ಬಂಧಿಗಳು ದಾಳಿ ನಡೆಸಿ 5.5 ಕೆಜಿ ಅಂದಾಜು 75 ಲಕ್ಷ ಮೌಲ್ಯದ ಶ್ರೀಗಂಧ ನಾಟಾ ಮತ್ತು ದೊಡ್ಡ ಅಬ್ಬೂರು ಗ್ರಾಮದ ಪ್ರಕಾಶ್ ಎಂಬಾತನನ್ನು ಬಂಧಿಸಿದ್ದಾರೆ.
ಅಬ್ಬೂರುಕಟ್ಟೆ ಸಮೀಪದ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರವನ್ನು ಕಡಿದು ಕೊಣನೂರಿಗೆ ಸಾಗಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತು ಅರಣ್ಯಾಧಿಕಾರಿ ಪುನಿತ್ ನೇತೃತ್ವದ ತಂಡ ದಾಳಿ ನಡೆಸಿದ್ದು ಪ್ರಕಾಶ್ ನನ್ನು ಮಾಲು ಸಮೇತ ಬಂಧಿಸಿದ್ದು ಮತ್ತೊಬ್ಬ ಆರೋಪಿ ಅದೇ ಗ್ರಾಮ ಮಂಜು ಪರಾರಿಯಾಗಿದ್ದಾನೆ.