ಕ್ರೀಡಾಕೂಟಕ್ಕೆ ಕೊರೊನಾ ಕಂಟಕ

ಕೊಡಗು: ಪ್ರಸಕ್ತ ವರ್ಷದ ಕೋವಿಡ್ 19ರ ನಿಯಮ ಪಾಲನೆ ಮಾಡುವ ಅನಿವಾರ್ಯವಾಗಿರುವ ಕಾರಣದಿಂದ ರಾಜ್ಯದಿಂದ ಇತರೆಡೆ ಕರೆದೊಯ್ಯುವುದು ಮತ್ತು ಆಯೋಜನೆ ಮಾಡುವುದು ಕಷ್ಟಸಾಧ್ಯವಾಗಿರುವ ಕಾರಣ ಪ್ರೌಢ ಶಾಲೆಗಳಲ್ಲಿ ಕ್ರೀಡಾಕೂಟಗಳನ್ನು ನಡೆಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಲಾಖೆಗೆ ಸೂಚನೆ ನೀಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಯವಾದರೂ ಈ ಸಮಯಕ್ಕೆ ಸರಿಯಾಗಿ ಸಿಇಟಿ, ನೀಟ್ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.