ಕ್ಯಾಕ್ಟಸ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಕಾಶಿ ಕುಟ್ಟಪ್ಪ ಇನ್ನಿಲ್ಲ

ಅತ್ಯಂತ ಎತ್ತರದ ಕ್ಯಾಕ್ಟಸ್ (ಕಳ್ಳಿ) ಗಿಡ ಬೆಳೆಸಿ 1988ರಲ್ಲೇ ಗಿನ್ನೀಸ್ ದಾಖಲೆ ಬರೆದಿದ್ದ ಕಾಶಿ ಕುಟ್ಟಪ್ಪ ನಿಧನರಾಗಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು,ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಕಾಶಿ ಕುಟ್ಪಪ್ಪ 1988ರಲ್ಲಿ ಮೈಸೂರಿನ ಸಿದ್ದಾರ್ಥ ನಗರದ ನಿವಾದ ಎದುರಿಗೆ 44 ಅಡಿ ಎತ್ತರದ ಕ್ಯಾಕ್ಟಸ್ ಬೆಳೆದದ್ದು, ಅಂದಿನ ಕಾಲಕ್ಕೆ ಅದ್ಬುತವೇ ಆಗಿತ್ತು,ಅಷ್ಟೇನು ಪ್ರಚಾರವಿಲ್ಲದ ಕಾಲದಲ್ಲೂ ಇಂತಹಾ ಸಾಧನೆ ಮಾಡಿರುವ ಕಾಶಿ ಕುಟ್ಟಪ್ಪ ಇನ್ನಿಲ್ಲ.