ಕೌಟುಂಬಿಕ ಕಲಹ ಶಂಕೆ: ವ್ಯಕ್ತಿ ಆತ್ಮಹತ್ಯೆ

ಕೌಟುಂಬಿಕ ಕಲಹಕ್ಕೆ ಸಿಲುಕಿ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ,ಇದೀಗ ಮನೆ ಗೋಡೆಯ ಮೇಲೆಯೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗಿನ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ದಲ್ಲಿ ನಡೆದಿದೆ.
ಇಲ್ಲಿನ ಮಾದಾಪುರದ ರಸ್ತೆಯಲ್ಲಿರುವ ರಾಮ ಕಾಂಪ್ಲೆಕ್ಸ್ ಪಕ್ಕದ ಖಾಲಿ ಜಾಗದ ಮೇಲ್ಛಾವಣಿಗೆ ತನ್ನ ಪಂಚೆಯಿಂದಲೇ ನೇಣು ಬಿಗಿದುಕೊಂಡಿದ್ದು ಮೃತನು ಮಡಿಕೇರಿಯ ಜ್ಯೋತಿ ನಗರದ ಯೋಗೇಂದ್ರ ಎಂದು ತಿಳಿದುಬಂದಿದೆ.
ಕಿರುಕುಳದಿಂದ ಬೇಸತ್ತ ಯೋಗನಂದ ತನ್ನ ಸಾವಿಗೆ ಹೆಂಡತಿ ಸರಸ್ವತಿ, ಮತ್ತು ಆಕೆಯ ತಮ್ಮ ಕೃಷ್ಣ ಎಂದು ಅವರ ದೂರವಾಣಿ ಸಂಖ್ಯೆ ಸೇರಿಸಿ ಗೊಡೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣನಾಗಿದ್ದು ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.