ಕೋವಿಶೀಲ್ಡ್ 2ನೇ ವ್ಯಾಕ್ಸಿನೇಷನ್ ಪಡೆಯಲು ಅಂತರ ಪರಿಷ್ಕರಣೆ


13.05.21 ರಂದು ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್‌ಇಜಿವಿಎಸಿ) ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಮೊದಲ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲು ಸಲಹೆ ನೀಡಿರುತ್ತದೆ.

ಆದ್ದರಿಂದ, 2 ಡೋಸ್‌ಗಳ ನಡುವಿನ COVISHIELD ಲಸಿಕೆಗಾಗಿ 6 ​​ರಿಂದ 8 ವಾರಗಳ ಹಿಂದಿನ ಮಧ್ಯಂತರವನ್ನು 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ.

ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನಂತರ 12 ವಾರಗಳನ್ನು ಪೂರ್ಣಗೊಳಿಸದ ನಾಗರೀಕರು ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಬೇಟಿ ನೀಡದಂತೆ ಕೋರಲಾಗಿದೆ.

2 ಬಾರಿ ಪಡೆಯುವ ಲಸಿಕೆಯ ನಡುವಿನ ಈ ಪರಿಷ್ಕೃತ ಸಮಯದ ಅಂತರ COVISHIELD ಲಸಿಕೆಗೆ ಮಾತ್ರ ಅನ್ವಯಿಸುತ್ತದೆ ಮತ್ತು COVAXIN ಲಸಿಕೆಗೆ ಅಲ್ಲ ಎಂದು ಪ್ರಕಟಣೆ ತಿಳಿಸಿದೆ.

error: Content is protected !!