fbpx

ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರಣ ಲಸಿಕೆ ಪ್ರಯೋಗಕ್ಕೆ ಅಸ್ತು

ನವದೆಹಲಿ, ಆ. 11- ಮಾರಕ ಸೋಂಕು ಕೊರೊನಾ ವಿರುದ್ಧ ಶಕ್ತಿ ಹೆಚ್ಚಿಸಿಕೊಳ್ಳುವುದಾಗಿ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಅನ್ನು ಮಿಶ್ರಣ ಮಾಡಿ ಲಸಿಕೆ ತಯಾರಿಸಿದರೆ ಆದ್ದರಿಂದ ಹೆಚ್ಚಿನ ಶಕ್ತಿ ವೃದ್ಧಿಯಾಗುವುದರಿಂದ ಆ ಲಸಿಕೆಪ್ರಯೋಗಕ್ಕೆ ಭಾರತೀಯ ಡ್ರಗ್ಸ್ ಕಂಟ್ರೋಲ್ ಜನರಲ್ (ಡಿಸಿಜಿಐ) ಒಪ್ಪಿಗೆ ನೀಡಿದೆ.

ಜುಲೈ 29 ರಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎರಡು ಲಸಿಕೆಗಳ ಮಿಶ್ರಣದ ಪ್ರಯೋಗವನ್ನು ನಡೆಸಲಾಗಿದ್ದು ಆದ್ದರಿಂದ ಉತ್ತಮ ಫಲಿತಾಂಶ ಸಿಕ್ಕಿರುವುದರಿಂದ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್‍ಗಳ ಮಿಶ್ರಣ ಲಸಿಕೆಯನ್ನು ಕೊಡಲು ಸಮ್ಮತಿಸಿದೆ.

ಭಾರತೀಯ ವೈದ್ಯಕೀಯ ಕೌನ್ಸಿಲ್ (ಐಸಿಎಂಆರ್) ಕೂಡ ಎರಡು ಲಸಿಕೆಗಳಿಂದ ಸಮ್ಮಿಲಿತವಾದ ಲಸಿಕೆಯಿಂದ ಮಾನವನ ದೇಹದಲ್ಲಿ ಬಹುದೊಡ್ಡ ನಿಯಂತ್ರಣ ಶಕ್ತಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದೆ.

ಇತ್ತೀಚೆಗೆ ವೆಲ್ಲೂರಿನಲ್ಲಿ ಹಮ್ಮಿಕೊಂಡಿದ್ದ ಲಸಿಕೆ ಅಭಿಯಾನದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಮಿಶ್ರಿತ ಲಸಿಕೆಯನ್ನು ನೀಡಲಾಗಿದ್ದು ಅವರಲ್ಲಿ ಯಾರಿಗೂ ಅಡ್ಡಪರಿಣಾಮಗಳು ಕಂಡುಬರದಿರುವುದು ಕೂಡ ಲಸಿಕೆ ಸಮ್ಮತಿಗೆ ನೆರವಾಗಿದೆ. ಉತ್ತರಪ್ರದೇಶದಲ್ಲೂ ಈ ಹಿಂದೆ ಇದೇ ರೀತಿಯ ಪ್ರಯೋಗವನ್ನು ಮಾಡಲಾಗಿತ್ತು.

error: Content is protected !!