ಕೋವಿಡ್ ಸಾವು ಹೆಚ್ಚಳ: ಆಸ್ಪತ್ರೆ ಮುಖ್ಯಸ್ಥರ ಬದಲಾವಣೆ

ಕೊಡಗು: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಸಾವಿನ ಪ್ರಕರಣಗಳ ಹೆಚ್ಚಾಗಿರುವ ಕಾರಣ ಮಡಿಕೇರಿ ಕೋವಿಡ್ ಆಸ್ಪತ್ರೆ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಹೆಚ್ಚುವರಿ ಪ್ರಭಾರ ಸರ್ಜನ್ ಆಗಿದ್ದ ಕೊಡಗು ವೈದಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಕೆ.ಕಾರ್ಯಪ್ಪರನ್ನು ಬದಲಾಯಿಸಿ ಕೊಡಗು ವೈದಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ಆರ್.ವಿಶಾಲ್ ಕುಮಾರ್ ರನ್ನು ನೇಮಕ ಮಾಡಲಾಗಿದೆ.ಕೊಡಗು ವೈದಕೀಯ ವಿಜ್ಞಾನ ಸಂಸ್ಥೆಯ ವೈದಕೀಯ ಅಧೀಕ್ಷಕ ಹುದ್ದೆಯಲ್ಲಿದ್ದ ಹೆಚ್ಚುವರಿ ಪ್ರಭಾರ ನಿರ್ವಹಿಸುತ್ತಿದ್ದ ಡಾ ಲೋಕೇಶ್ ರನ್ನು ಬದಲಾಯಿಸಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ.ಎನ್ ಮಂಜುನಾಥ್ ರನ್ನು ನೇಮಕ ಮಾಡಲಾಗಿದೆ.

error: Content is protected !!