ಕೋವಿಡ್ ಲಸಿಕೆ ನೂರರಷ್ಟು ಗುರಿ ಸಾಧಿಸಲು ‘ಟಾಸ್ಕ್ ಫೋಸ್೯ ಸಭೆ

ಬಾಳೆಲೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೊವಿಡ್ ಲಸಿಕೆ ಶೇಕಡ ನೂರರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಕ್ಕೇರ ಅಯ್ಯಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ”ಟಾಸ್ಕ್ ಪೋರ್ಸ್” ಸಭೆಯಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಯಿತು.
ಪಂಚಾಯಿತಿ ಜನಸಂಖ್ಯೆಯಲ್ಲಿ ಗಿರಿಜನರೇ ಹೆಚ್ಚು ಇದ್ದು, ಇವರಲ್ಲಿ 70/ ಗಿರಿಜನರು ಕೊವಿಡ್ ಲಸಿಕೆ ಪಡೆದು ಕೊಂಡಿದ್ದು ಉಳಿದವರು ಕೂಡ ಲಸಿಕೆ ಹಾಕಿಸಿಕೊಳ್ಳುವಂತೆ ಗಿರಿಜನ ಜನವಸತಿ ಪ್ರದೇಶದಲ್ಲಿ ವ್ಯಾಪಕ ಪ್ರಚಾರ, ಪ್ರಸಾರ ಕಾರ್ಯ ನಡೆಸಿ ಅವರ ಮನವೊಲಿಸಿ ಲಸಿಕೆಯನ್ನು ಹಾಡಿಗಳ ಮನೆ ಮನೆಗೆ ತೆರಳಿ ನೀಡಲು ನಿರ್ಣಯಿಸಲಾಯಿತು.
ಜೊತೆಗೆ ಕಾಪಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗದವರೆಲ್ಲಾ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಮಾಲಿಕರೊಂದಿಗೆ ಅಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ಅಡಳಿತ ಮಂಡಳಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಯಿತು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ನೊಡಲ್ ಅಧಿಕಾರಿ ಡಾ# ಎ. ಬಿ, ತಮ್ಮಯ್ಯ, ಪಂ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಮ್ಮುಣಿ, ಸಾಸು, ರಾಜು, ಬಾಳೆಲೆ ಪ್ರಾಥಮಿಕ ಅರೋಗ್ಯ ಕೇಂದ್ರದ ವೃೆದ್ಯಧಿಕಾರಿ ಅಶೋಕ್ ಕುಮಾರ್, ಪಿ. ಡಿ ಒ ಮನಮೋಹನ್,ಅರೋಗ್ಯ ನಿರ್ವಹಕರಾದ ತೇಜಸ್ ಗ್ರಾಮ ಲೆಕ್ಕಿಗರಾದ ಚಂದ್ರ ಪ್ರಸಾದ್, ಅರಣ್ಯ ಅದಿಕಾರಿ ಯೋಗೇಶ್,ಕೊವಿಡ್ ಟಾಸ್ಕ್ ಪೋರ್ಸ್ ಸದಸ್ಯರಾದ ಪ್ರಭುಕುಮಾರ್, ಪೂಣಚ್ಚ ಅಶಾ ಕಾರ್ಯಕರ್ತೆಯರು ಹಾಜರಿದ್ದರು