ಕೋವಿಡ್ ಲಸಿಕೆಯಲ್ಲಿ ಹಂದಿಯ ಗೆಲಾಟಿನ್ ಬಳಕೆ; ಇಸ್ಲಾಮ್ ಜಗತ್ತಿನಲ್ಲಿ ಕೋಲಾಹಲ!

ದುಬೈ: ಮುಸ್ಲಿಂ ಜಗತ್ತಿನಲ್ಲಿ ಕೊರೋನಾ ಲಸಿಕೆಗಳಿಗೆ ಸಂಬಂಧಪಟ್ಟ ಹಾಗೆ ದೊಡ್ಡ ಕೋಲಾಹಲ ಶುರುವಾಗಿದೆ. ಅದೇ, ಹಂದಿಯ ಗೆಲಾಟಿನ್ ಅಂಶವನ್ನ ಬಳಸಿ ಲಸಿಕೆ ತಯಾರಿಸಲಾಗ್ತಿದೆ ಅನ್ನೋ ವಿಚಾರ. ಆದ್ರೆ ಈಗ ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಅತ್ಯುನ್ನತ ಇಸ್ಲಾಮಿಕ್ ಕೌನ್ಸಿಲ್ ಈ ಬಗ್ಗೆ ಕ್ಲಾರಿಟಿ ನೀಡಿ ಫತ್ವಾ ಹೊರಡಿಸಿದೆ. ಹಂದಿಯ ಗೆಲಾಟಿನ್ ಹೊಂದಿರೋ ಕೊರೋನಾ ಲಸಿಕೆಯನ್ನ ಮುಸ್ಲಿಮರು ತೆಗೆದುಕೊಳ್ಳಬಹುದು ಅಂತ ಹೇಳಿದೆ. ಇಸ್ಲಾಂ ಪ್ರಕಾರ ಹಂದಿ ಮಾಂಸ ಸೇವನೆ ಧರ್ಮ ವಿರೋಧಿ, ಹರಾಮ್ ಅಂತ ಅವರು ನಂಬ್ತಾರೆ. ಈ ಕಾರಣಕ್ಕೆ ಇಡೀ ಜಗತ್ತಲ್ಲಿ ಮುಸ್ಲಿಮರಿಗೆ ಲಸಿಕೆ ಹಾಕೋದು ಕಷ್ಟ ಆಗಬಹುದು ಅಂತ ಹೊಸ ಸಮಸ್ಯೆ ಎದುರಾಗಿತ್ತು. ಆದ್ರೆ ಈಗ ಮುಸ್ಲಿಂ ದೇಶ ಯುಎಇನ ಅತ್ಯುನ್ನತ ಧಾರ್ಮಿಕ ಸಮಿತಿ, ಲಸಿಕೆ ಆಹಾರ ಅಲ್ಲ. ಅದೊಂದು ಔಷಧ.

ಈ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳೋದು ಎಲ್ಲಕ್ಕಿಂತ ಮುಖ್ಯ ಅಂತ ಹೇಳಿದೆ. ಈ ಬಗ್ಗೆ ಮಾತನಾಡಿರೋ ಸಮಿತಿಯ ಮುಖ್ಯಸ್ಥ ಶೇಖ್ ಅಬ್ದುಲ್ಲಾಹ್ ಬಿನ್ ಬಾಯ್ಯಾಹ್, ಸದ್ಯಕ್ಕೆ ನಮ್ಮ ಮುಂದೆ ಬೇರೆ ಆಪ್ಶನ್ಸ್ ಇಲ್ಲ ಅಂತ ಹೇಳಿದ್ದಾರೆ. ಈ ವಿಚಾರ ಇತ್ತೀಚೆಗಷ್ಟೇ ಭಾರತದಲ್ಲೂ ವಿವಾದಕ್ಕೆ ಕಾರಣ ಆಗಿತ್ತು. ಆಲ್ ಇಂಡಿಯಾ ಸುನ್ನಿ ಜಮಾತುಲ್ ಉಲೇಮಾ ಕೌನ್ಸಿಲ್ ಮತ್ತು ರಝಾ ಅಕಾಡೆಮಿ ಚೀನಾ ಮೂಲದ ಕೆಲ ಲಸಿಕೆಗಳನ್ನ ಹರಾಮ್ ಅಂತ ಡಿಕ್ಲೇರ್​ ಮಾಡಿದ್ರು. ಅಂದ್ರೆ ಈ ಚೀನಾ ಲಸಿಕೆಗಳು ಹಂದಿಯ ಗೆಲಾಟಿನ್ ಹೊಂದಿದ್ದು, ಅದನ್ನ ಮುಸ್ಲಿಮರು ತಗೋಬಾರ್ದು ಅಂತ. ಆದ್ರೆ ಈಗ ಕಟ್ಟರ್ ಸುನ್ನಿ ಇಸ್ಲಾಮಿಕ್ ನಿಯಮಗಳನ್ನ ಪಾಲಿಸುವ ಯುನೈಟೆಡ್​ ಅರಬ್ ಎಮಿರೇಟ್ಸ್​ನಲ್ಲಿ ತಗೋಬೋದು ಅಂತ ಫತ್ವಾ ಹೊರಡಿಸಿರೋದ್ರಿಂದ ಮುಂದೆ ಏನೇನು ಬದಲಾವಣೆ ಆಗುತ್ತೆ ಅಂತ ನೋಡ್ಬೇಕು.

error: Content is protected !!