ಕೋವಿಡ್ ರಿಪೋರ್ಟ್ ಸಮಸ್ಯೆ :ಕೊಡಗು-ಕೇರಳ ನಡುವಿನ ಮದುವೆಗೆ ಅಡ್ಡಿ

ಕೊಡಗು: ಕೇರಳದ ಕಾಸರಗೋಡಿನ ಮುಳಿಯಾರಿನ ವರ,ಮಡಿಕೇರಿ ಸಮೀಪದ ಕಡಗದಾಳುವಿನ ವಧು ಇವರಿಬ್ಬರ ಮದುವೆಗೆ ಕೋವಿಡ್ ರಿಪೋರ್ಟ್ ಪಡೆಯಲು ಸಮಸ್ಯೆ ಎದುರಾಗಿದೆ. ಮಾರ್ಚ್ 1 ರಂದು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಆಶಾ ಮತ್ತು ನಾರಾಯಣ್ ನಾಯರ್ ರವರ ವಿವಾಹ ನಿಶ್ಚಯವಾಗಿತ್ತು,ಇನ್ನೇನು ಕೇರಳದಿಂದ ಮಡಿಕೇರಿಗೆ ಹೊರಟಿರುವ ನಾರಾಯಣ್ ಕುಟುಂಬಕ್ಕೆ ಕೋವಿಡ್ ಪರೀಕ್ಷೆ ನಡೆಸಿ ಬರುವುದು ಕಡ್ಡಾಯವಾಗಿದೆ,ಆದರೆ ಶನಿವಾರ ಮತ್ತು ಭಾನುವಾರ ರಜೆ ಇದ್ದು,72 ಗಂಟೆಗಳ ರಿಪೋರ್ಟ್ ಪಡೆಯಬೇಕಾಗಿದೆ. ಖಾಸಗಿಯಾಗಿ ಪಡೆಯಬೇಕಾದರೂ ನಾರಾಯಣ್ ಕುಟುಂಬದ ಕನಿಷ್ಟ 10 ಮಂದಿಗೆ ರಿಪೋರ್ಟ್ ಮಾಡಬೇಕಾದರೂ 25 ಸಾವಿರ ಖರ್ಚು ಆಗುವುದಂತೂ ಸತ್ಯ. ಇದೀಗ ಸೋಮವಾರ ಬೆಳಗ್ಗೆ 9.45 ಶುಭ ಲಗ್ನದಲ್ಲಿ ಮದುವೆ ನಡೆಯಬೇಕಾಗಿದೆ,ಅದಲ್ಲದೆ ಆರತಕ್ಷತೆಗೆ ಖಾಸಗಿ ಚೌಲ್ಟ್ರಿ ಸಹಾ ನಿಗಧಿ ಪಡಿಸಲಾಗಿದ್ದು ಧಿಡೀರ್ ಹೊಸ ಕಾನೂನು ಎರಡು ಕುಟುಂಬಕ್ಕೆ ಸಮಸ್ಯೆ ಉಂಟಾಗಿದೆ. ಪರೀಕ್ಷೆ ಮಾಡಿಸಲು ಎರಡು ಕುಟುಂಬಗಳಿಂದಲೂ ಸಮ್ಮತಿಯಿದೆ,ಇದಕ್ಕೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.