ಕೋವಿಡ್ ಮಾರ್ಗಸೂಚಿ ಪಾಲಿಸಿ ಪಡಿತರ ವಿತರಿಸಿ

ಕೊಡಗು: ಕೋವಿಡ್ 19 ಸೋಂಕು ಹರಡುವಿಕೆಯಿಂದ ಪಡಿತರ ಆಹಾರ ಧಾನ್ಯವನ್ನು ಬಯೋಮೆಟ್ರಿಕ್ ಅಥವಾ ಪಡಿತರ ಚೀಟಿ ಕುಟುಂಬದ ಯಾವುದೇ ಸದಸ್ಯರ ಅಧಾರ್ ಜೊತೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆದು ಪಡಿತರ ಚೀಟಿದಾರರಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡುವಂತೆ ಜಿಲ್ಲೆಯ ನ್ಯಾಯಬೆಲೆ ಅಂಗಡಿದಾರರಿಗೆ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

ಸರ್ಕಾರದಿಂದ ದತ್ತಾಂಶದಲ್ಲಿ ಅವಕಾಶವಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸಲು ಹಾಗೂ ಸ್ಯಾನಿಟೈಷರ್, ಮಾಸ್ಕ್ ನ್ನು ಕಡ್ಡಾಯವಾಗಿ ಬಳಸಿ ಪಡಿತರ ಆಹಾರ ಧಾನ್ಯ ವಿತರಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

error: Content is protected !!