fbpx

ಕೋವಿಡ್ ಪರಿಹಾರ: ಕೊಡಗು ಜಿಲ್ಲೆಗೆ 111 ಲಕ್ಷ ರೂ ಬಿಡುಗಡೆ

ಸರ್ಕಾರ ಘೋಷಿಸಿರುವ ಕೋವಿಡ್ ಪರಿಹಾರ ಧನ ಬಿಡುಗಡೆಯಾಗಿದ್ದು, ಕೊಡಗು ಜಿಲ್ಲೆಗೆ 111 ಲಕ್ಷ ರೂ ಹಣ ಮಂಜೂರು ಮಾಡಲಾಗಿದ್ದು,ಮೇಲ್ಮನೆ ಚುನಾವಣೆಯ ನೀತಿ ಸಂಹಿತೆಯ ಬಳಿಕ ಹಂಚಿಕೆ ನಡೆಯಲಿದೆ.

ಬಿಪಿಎಲ್ ಪಡಿತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ 50 ಸಾವಿರ, ರಾಜ್ಯ ಸರ್ಕಾರದಿಂದ 1 ಲಕ್ಷ ಘೋಷಣೆ ಮಾಡಿದ್ದು ಜಿಲ್ಲೆಯಲ್ಲಿ ನವೆಂಬರ್ ಅಂತ್ಯಕ್ಕೆ 431 ಮಂದಿ ಮೃತರಾಗಿದ್ದರು. ಮೊದಲ ಹಂತದಲ್ಲಿ 331 ಅರ್ಜಿಗೆ ಪೈಕಿ 274 ಅರ್ಜಿಯನ್ನು ರಾಜ್ಯ ಸರ್ಕಾರ ಅನುಮೋದಿಸಿದೆ. ಉಳಿದ ಅರ್ಜಿಗಳು ಹೊರ ಜಿಲ್ಲೆಯದಾಗಿದ್ದು, ಆಯಾ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ.

ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಎರಡನೇ ಹಂತದ ಪರಿಹಾರ ಬಿಡುಗಡೆಯಾದ ನಂತರ ಹಂಚಿಕೆ ಮಾಡಲಾಗುವುದು. ಇವುಗಳ ಪೈಕಿ ಐದು ಅರ್ಜಿಯಲ್ಲಿ ವಾರಸುದಾರರು ಇಲ್ಲ ಎಂದು ತಿಳಿದು ಬಂದಿದೆ.

error: Content is protected !!