ಕೋವಿಡ್ ನಿಯಮ ಉಲ್ಲಂಘನೆ: ಹತ್ತು ಅಂಗಡಿಗಳಿಗೆ ಬೀಗ

ಮಡಿಕೇರಿ: ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸಿದ್ದ ಹತ್ತು ಅಂಗಡಿಗಳನ್ನು ಮಡಿಕೇರಿ ನಗರಸಭೆ ಮುಚ್ಚಿಸಿದೆ. ಮಡಿಕೇರಿ ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯ ನಿಟ್ಟಿನಲ್ಲಿ ನಗರಸಭೆ ಕ್ರಮಗಳನ್ನು ಕೈಗೊಂಡಿದೆ.

ಕಳೆದ ವಾರ ನಗರಸಭೆ ತಿಳಿಸಿದ್ದರೂ ಹತ್ತಕ್ಕೂ ಹೆಚ್ಚು ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಇದರಿಂದ ನಗರಸಭೆ ಆಯುಕ್ತ ರಾಮದಾಸ್ ಯಾವುದೇ ಮುಲಾಜಿಲ್ಲದೆ ಅಂಗಡಿಗಳನ್ನು ಮುಚ್ಚಿಸಿದರು. ಮೆಡಿಕಲ್ ಶಾಪ್‍ಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ನಗರದಲ್ಲಿ ಎರಡು ಮೆಡಿಕಲ್ ಶಾಪ್ ಈ ಸಂದರ್ಭ ಆರ್ನ ಮೆಡಿಕಲ್ ಶಾಪ್‍ನ ಮಾಲೀಕರು ಮತ್ತು ಸಿಬ್ಬಂದಿ, ನಗರಸಭೆ ಆಯುಕ್ತ ರಾಮದಾಸ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಸಿಟ್ಟಿಗೆದ್ದ ರಾಮದಾಸ್ ಮೆಡಿಕಲ್ ಶಾಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.ಲಾಕ್‍ಡೌನ್ ಮುಗಿಯುವವರೆಗೆ ಈ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ತರಕಾರಿ ವ್ಯಾಪಾರಿಗಳಿಗೂ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಅವರು ಇಂದಿನಿಂದ ವ್ಯಾಪಾರ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

error: Content is protected !!