ಕೋವಿಡ್ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದ ನಾಗರೀಕರು:ಗೊಂದಲದ ಗೂಡಾದ ಕುಶಾಲನಗರ ರೈತ ಸಹಕಾರ ಭವನ

ಕೊಡಗು: ಸಮರ್ಪಕವಾದ ಮಾಹಿತಿಯ ಕೊರತೆಯಿಂದ ಕುಶಾಲನಗರ ರೈತ ಸಹಕಾರ ಭವನದಲ್ಲಿ ಆದ್ಯತೆ ಮೇರೆಗೆ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದ ಸಂದರ್ಭ,ಇತರೆ ನಾಗರಿಕರು ಲಸಿಕೆ ಪಡೆಯಲು ನೋಡಲ್ ಅಧಿಕಾರಿಗಳ ಶಿಫಾರಸ್ಸು ಪತ್ರ ತರಲು ಆರೋಗ್ಯ ಅಧಿಕಾರಿಗಳ ಸೂಚನೆ ನೀಡುತ್ತಿದ್ದಂತೆ ಗೊಂದಲ ಉಂಟಾಗಿತ್ತು.

ಬೆಳಗ್ಗೆ 7 ಗಂಟೆಯಿoದ ಲಸಿಕೆ ಪಡೆಯಲು ಕಾದು ಸುಸ್ತಾದ ಸಾರ್ವಜನಿಕರು
ಇದುವರೆಗೆ ಶಿಸ್ತು ಬದ್ದವಾಗಿ ನಡೆಯುತ್ತಿದ್ದ ಕುಶಾಲನಗರ ಲಸಿಕಾ ಕೇಂದ್ರದಲ್ಲಿ ಗುರುವಾರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಲಸಿಕಾ ಕೇಂದ್ರದಲ್ಲಿ ಗೊಂದಲ ಸರಿಪಡಿಸಲು ಪೊಲೀಸರ ಮದ್ಯಪವೇಶ ಮಾಡಬೇಕಾದ ಸನ್ನಿವೇಶ ಏರ್ಪಟ್ಟಿದ್ದ ಕಾರಣ ವಾಗ್ವಾದಗಳು ನಡೆದವು.

error: Content is protected !!