ಕೋವಿಡ್ ನಡುವೆ ದುಬಾರೆ ಆನೆ ಕ್ಯಾಂಪ್ ಪ್ರವಾಸಿಗರಿಗೆ ಮುಕ್ತ

ಕಳೆದ ಹಲವು ತಿಂಗಳಿನಿಂದ ಕೋವಿಡ್ ಕಾರಣಕ್ಕೆ ನಿರ್ಭಂಧಕ್ಕೆ ಒಳಗಾಗಿದ್ದ ದುಬಾರೆ ಸೋಕಾನೆ ಶಿಬಿರ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಬೆಳಗ್ಗೆ 9 ಗಂಟೆಯಿಂದ 11 ಮತ್ತು ಸಂಜೆ 4.30 ರಿಂದ ಒಂದು ಗಂಟೆಗಳ ಕಾಲ ಪ್ರವಾಸಿಗರು ಭೇಟಿ ಮಾಡಬಹುದಾಗಿದ್ದು,ಸಫಾರಿಯಾಗಲಿ,ಆನೆಗಳಿಗೆ ಸ್ನಾನ ಮಾಡಿಸುವುದು,ಆಹಾರ ನೀಡುವ ಚಟುವಟಿಕೆಗಳಿಗೆ ನಿರ್ಭಂಧ ಹೇರಲಾಗಿದ್ದು.ಕೇವಲ ಆನೆಗಳ ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದ್ದು ಕಡ್ಡಾಯ ಕೋವಿಡ್ ನಿಯಮ ಪಾಲಿಸಲು ಅರಣ್ಯ ಇಲಾಖೆ ಸೂಚನೆ ನೀಡಲಾಗಿದೆ.

ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಅರಣ್ಯ ಇಲಾಖೆ ಮಾಡಿದ್ದು ಒಂದು ಉತ್ತಮ ಆನೆ ಪಾರ್ಕ್ ವಾತಾವರಣ ನಿರ್ಮಾಣ ಮಾಡಿದೆ.
ಇತ್ತ ರಿವರ್ ರಾಫ್ಟಿಂಗ್ ಸಾಹಸ ಕ್ರೀಡೆಗೆ ನಿರಬಂಧ ಹೇರಲಾಗಿದೆ.

error: Content is protected !!