ಕೋಳಿ ಜೂಜು ಅಡ್ಡೆ ಮೇಲೆ ದಾಳಿ

ಸುದ್ದಿ ಸಂತೆ Exclusive report
ಕೊಡಗು(ಚೆಂಬು): ಅಕ್ರಮವಾಗಿ ಕೋಳಿ ಅಂಕ,ಕೋಳಿ ಕಟ್ಟ ಎಂದು ಕರೆಲ್ಪಡುವ ಜೂಜಾಟವನ್ನು ನಡೆಸುತ್ತಿದ್ದ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದಾರೆ ರುತ್ತಾರೆ.ಖಚಿತ ಮಾಹಿತಿ ದೊರೆತ ಮೇಲೆ ಮಡಿಕೇರಿ ತಾಲೋಕು, ಚೆಂಬು ಗ್ರಾಮದ ಉರುಬೈಲ್ ಎಂಬಲ್ಲಿ ದೊಡ್ಡ ಗುಂಪೊಂದು ಕೋಳಿ ಅಂಕ ನಡೆಸುತ್ತಿರುವುದನ್ನು ಪತ್ತೆಹಚ್ಚಿದ ಕೊಡಗು ಜಿಲ್ಲಾ ಡಿ.ಸಿ.ಐ.ಬಿ. ಪೊಲೀಸರು ದಾಳಿ ನಡೆಸಿ ಕೃತ್ಯಕ್ಕೆ ಬಳಸಿದ್ದ
ಕೋಳಿಗಳನ್ನು ಕಟ್ಟಿ ಜೂಜಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದಿದ್ದಾರೆ,ಕೋಳಿ ಜೂಜಾಟ(ಅಂಕ)ಕ್ಕೆ ಬಳಸಿದ್ದ 15 ಸಾವಿರ ರೂ ಬೆಲೆಬಾಳುವ 35 ಕೋಳಿಗಳು ಮತ್ತು 20,300 ರುಪಾಯಿ ನಗದನ್ನು ವಶಕ್ಕೆ ಪಡಿಯಲಾಗಿದೆ.ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂಜಾಡುತ್ತಿದ್ದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.