ಕೋಪ್ಟಾ ಕಾಯ್ದೆ ಉಲ್ಲಂಘನೆ; 930 ರೂ ದಂಡ ಸಂಗ್ರಹ

ವಿರಾಜಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ವಿರಾಜಪೇಟೆ ಟಿಎಚ್‍ಸಿ ವ್ಯಾಪ್ತಿಯ ವಿರಾಜಪೇಟೆ ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯ ಕೋಪ್ಟಾ ಕಾಯ್ದೆ ಉಲ್ಲಂಘನೆ ಸಂಬಂಧ ಅಂಗಡಿ, ಬಾರ್ ಹಾಗೂ ಹೋಟೆಲ್‍ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಆರೋಗ್ಯ ಶಿಕ್ಷಣವನ್ನು ನೀಡಿ ಸೆಕ್ಷನ್ 4 ಅಡಿಯಲ್ಲಿ 880 ರೂ, ಸೆಕ್ಷನ್ 6ಂ ಅಡಿಯಲ್ಲಿ 50 ರೂ ಒಟ್ಟು 930 ರೂ ದಂಡ ಸಂಗ್ರಹಿಸಲಾಯಿತು.

ಈ ದಂಡದ ಮೊತ್ತವನ್ನು ಜಿಲ್ಲಾಧಿಕಾರಿಯವರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರ ಜಂಟಿ ಖಾತೆಗೆ ಜಮಾ ಮಾಡಲಾಯಿತು.

error: Content is protected !!