fbpx

ಕೋಟ್ಪಾ ಕಾಯ್ದೆ ಉಲ್ಲಂಘನೆ ಅನಿರೀಕ್ಷಿತ ಭೇಟಿ

ಮಡಿಕೇರಿ ಸೆ.14:-ತಾಲೂಕಿನ ಬಲಮೂರಿ, ಪಾರಾಣೆ ಪಟ್ಟಣದಲ್ಲಿ ಬುಧವಾರ ಅಂಗಡಿ ಮತ್ತು ಹೋಟೆಲ್‍ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಕುರಿತು 14 ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಯಿತು.

ಸೆಕ್ಷನ್ 04 ಅಡಿಯಲ್ಲಿ 13 ಪ್ರಕರಣಗಳಿಗೆ ರೂ.1450 ಮತ್ತು ಸೆಕ್ಷನ್ 6ಎ ಅಡಿಯಲ್ಲಿ 1 ಪ್ರಕರಣಗಳಿಗೆ ರೂ.100 ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ರೂ.1550 ದಂಡವನ್ನು ವಿಧಿಸಿ ಆರೋಗ್ಯ ಶಿಕ್ಷಣ ನೀಡಲಾಯಿತು. ಸಂಗ್ರಹಣೆಯಾದ ದಂಡವನ್ನು ಜಿಲ್ಲಾಧಿಕಾರಿ ಅವರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿಯಲ್ಲಿ ಡಿಎಚ್‍ಇಒ, ಎಸ್‍ಆರ್.ಎಚ್‍ಐಒ, ಜಿಲ್ಲಾ ತಂಬಾಕು ಸಂಯೋಜಕರು, ಜಿಲ್ಲಾ ಸಮಾಜ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಎಚ್‍ಐಒ, ಪಿಎಚ್‍ಸಿಒ, ಸಿಎಚ್‍ಒ ಮತ್ತು ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು.

error: Content is protected !!