ಕೊ.ಲೇ.ಕ ಬಳಗದಿಂದ ಕೊರೋನಾ ಮರೆಯಲು ಭಾವಗೀತಾ ಸಪ್ತಾಹ

ಮಡಿಕೇರಿ ಜೂ 12. ಕೊರೊನಾದ ಬೀಕರ ಸೋಂಕಿನ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ “ಕೊರೋನಾ ಮರೆಯಲು ಭಾವಗೀತಾ ಸಪ್ತಾಹ”
ಮೂಲಕ ಕಾರ್ಯಕ್ರಮ ಏರ್ಪಡಿಸಲಾಗಿದೆ
ಕಾರ್ಯಕ್ರಮಕ್ಕೆ ಅಭೂತಪೂರ್ವ ನೋಂದಣಿ ಬಂದಿದ್ದು 130 ಮಂದಿ ಗಾಯಕರು ನೋಂದಾಯಿಸಿಕೊಂಡಿದ್ದಾರೆ. ಏಳು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ 18 ಜನ ಗಾಯಕರು ಭಾವಗೀತೆಯನ್ನು ಹಾಡಲಿದ್ದಾರೆ.13.06.2031 ರ ಭಾನುವಾರದಿಂದ19.06.2021 ರ ಶನಿವಾರದ ವರೆಗೆ ಪ್ರತಿದಿನ ಸಂಜೆ 5.00 ಗಂಟೆಯಿಂದ 6.30 ರವರೆಗೆ ನಡೆಯಲಿದೆ.
13.06.2031 ರ ಭಾನುವಾರ ಸಂಜೆ 5.00 ಗಂಟೆಗೆ
ಕಾರ್ಯಕ್ರಮವನ್ನು ಜಿಲ್ಲೆಯ ಹಿರಿಯ ಗಾಯಕ, ಶಕ್ತಿ ಪತ್ರಿಕೆಯ ಸಂಪಾದಕ ಶ್ರೀ ಚಿದ್ವಿಲಾಸ್ ರವರಿಂದ ಭಾವಗೀತೆ ಹಾಡುವ ಮೂಲಕ ಉದ್ಘಾಟಿಸಲಿದ್ದಾರೆ.
ಅಲ್ಲದೇ ಭಾವಗೀತೆ ಬಗ್ಗೆ ಜಿಲ್ಲೆಯ ಹಿರಿಯ ಸಾಹಿತಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ರೈ ರವರು ಮಾತನಾಡಲಿದ್ದಾರೆ.
ಮೊದಲ ದಿನ 18 ಗಾಯಕರು ಭಾವಗೀತೆ ಹಾಡಲಿದ್ದಾರೆ.ಆಸಕ್ತರು ಈ ಕೆಳಗೆ ನೀಡಿರುವ ಗೂಗಲ್ ಮೀಟ್ ಲಿಂಕ್ ಕ್ಲಿಕ್ ಮಾಡುವ ಮುಖಾಂತರ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ
https://meet.google.com/pve-ivtf-jso
ಎಂದು ಬಳಗದ ಕಾರ್ಯದರ್ಶಿ ವಿಲ್ಫರ್ಡ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.