ಕೊ.ಜಿ.ಲೇ.ಕ ಬಳಗದ ವತಿಯಿಂದ ದಾಸರ ಪದಗಳ ಗಾಯನ ಕಾರ್ಯಕ್ರಮ;ಶ್ರೀ ವಿದ್ಯಾ ಭೂಷಣರಿಂದ ಉದ್ಘಾಟನೆ

ಮಡಿಕೇರಿ ಜೂನ್ 29. ಕೋರೋನಾದ ಬೀಕರ ಸೋಂಕಿನ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ‌ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣ‌ಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ದಾಸರ ಪದಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈಗಾಗಲೇ ಕೊಡಗಿನ ಗಾಯಕರಿಗೆ ಜಾನಪದ ಮತ್ತು ಭಾವಗೀತೆ ಹಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಭಾವಗೀತೆ ಕಾರ್ಯಕ್ರಮ ಮತ್ತು ಜಾನಪದ ಹಾಡುಗಾರಿಕೆಯ ಕಾರ್ಯಕ್ರಮದಲ್ಲಿ ಏಳು ದಿನಗಳ ಕಾಲ 130 ಗಾಯಕರು ತಮ್ಮ ಕಂಠಸಿರಿಯನ್ನು ಪ್ರಸ್ತುತ ಪಡಿಸಿದರು.
ಇದೀಗ ದಾಸ ಸಾಹಿತ್ಯದ ಹಾಡುಗಳನ್ನು ಹಾಡುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಜಿಲ್ಲೆಯಾದ್ಯಂತ 150 ಗಾಯಕರು ನೋಂದಾಯಿಸಿಕೊಂಡಿದ್ದು. ದಿನಾಂಕ 30.06.21 ರಿಂದ 06.07.21 ರವರೆಗೆ ಏಳು ದಿನಗಳ ಕಾಲ ಪ್ರತಿದಿನ ಸಂಜೆ 5.00 ರಿಂದ 6.30 ರವರೆಗೆ ನಡೆಯಲಿದೆ ಪ್ರತಿದಿನ 23 ಜನ ಗಾಯಕರು ಹಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಗಮ ಸಂಗೀತ ಲೋಕದ ಖ್ಯಾತನಾಮರಾದ ಶ್ರೀ ವಿದ್ಯಾ ಭೂಷಣರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ.ಪಿ ರವರು ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಯೋಜಕರಾದ ಅಂಬೆಕಲ್ ನವೀನ್ ರವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ

ಪುರಂದರವದಾಸ,ಕನಕದಾಸ ,ವ್ಯಾಸತೀರ್ಥರು,ಶ್ರೀಪಾದರಾಯರು, ಗೋಪಾಲದಾಸ ,ಶ್ರೀ ರಾಘವೇಂದ್ರ ತೀರ್ಥರು, ಹೀಗೆ….ಹಲವಾರು ದಾಸರು ರಚಿಸಿದ ದಾಸರ ಪದಗಳ ಗಾಯನ ಕಾರ್ಯಕ್ರಮ ಇದಾಗಿದ್ದು ಕಾರ್ಯಕ್ರಮ ವೀಕ್ಷಿಸುವವರು ಈ ಕೆಳಗೆ ಸೂಚಿಸಿದ ಗೂಗಲ್ ಮೀಟ್ ಲಿಂಕ್ ಅನ್ನು ಒತ್ತುವ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು
ಬಳಗದ ಪ್ರದಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೂಗಲ್ ಮೀಟ್ ಲಿಂಕ್:
https://meet.google.com/pve-ivtf-jso

error: Content is protected !!