ಕೊ.ಜಿ.ಲೇ.ಕ ಬಳಗದ ದಾಸರ ಪದ ಕಾರ್ಯಕ್ರಮಕ್ಕೆ ಶ್ರೀ ವಿದ್ಯಾಭೂಷರಿಂದ ಚಾಲನೆ

ಮಡಿಕೇರಿ ಜು 1. ಹರಿದಾಸ ಪಂಥ, ಹರಿದಾಸ ಆಂದೋಲನ ನಮ್ಮ ನಾಡಿನ ಸೌಭಾಗ್ಯವಾಗಿದೆ. ಸಂಸ್ಕೃತದಲ್ಲಿದ್ದ ಸಾಹಿತ್ಯ ಸುಲಭದಲ್ಲಿ ಜನ ಸಾಮಾನ್ಯರಿಗೆ ಸಿಗಬೇಕು, ಅದರ ಸಾರ ಜನರಿಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ದಾಸರು ಕಠಿಣ ಭಾಷೆಯಲ್ಲಿದ್ದ ಸಾಹಿತ್ಯವನ್ನು ಹಾಡು ಗಬ್ಬಗಳನ್ನು ಹೊಸೆದು ಹರಿದಾಸರು ಜನರ ಮನ ಮನೆ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಾಸ ಸಾಹಿತ್ಯದ ಹರಿಕಾರ ಎಂದೇ ಪ್ರಖ್ಯಾತರಾದ
ಶ್ರೀ ವಿದ್ಯಾಭೂಷಣರು ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ದಾಸರಪದ ಗೀತಗಾಯನ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಉದ್ಘಾಟಿಸಿ ಮಾತನಾಡುತಿದ್ದರು.

ಮುಂದುವರಿದ ಅವರು 600 ವರ್ಷಗಳ ಹಿಂದೆ ರಚಿತವಾದ ಹರಿದಾಸ ಸಾಹಿತ್ಯ ಗಾನದ ಮುಖಾಂತರ ಇಂದಿಗೂ ಎಂದಿಗೂ ಪ್ರಸ್ತುತವಾಗಿದೆ. ಕೊರೋನಾದ ಕ್ಲಿಷ್ಟಕರ ಸಮಯದಲ್ಲಿ ದಾಸರಪದ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು.

ನಂತರ ಸಾಸಿರ ನಾಮದ ವೆಂಕಟರಮಣ ದಾಸನ ಮಾಡಿಕೊ ಎನ್ನ ಎನ್ನುವ ದಾಸ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ. ಪಿ. ಈ ಹಿಂದೆ ಜಾನಪದ ಹಾಡುಗಾರಿಕೆ, ಭಾವಗೀತಾ ಸಪ್ತಾಹ ಕಾರ್ಯಕ್ರಮ ಗೂಗಲ್ ಮೀಟ್ ನಲ್ಲಿ ನಡೆದಾಗ ಜಿಲ್ಲೆಯ ಕಲಾವಿದರು ಬೆಂಬಲ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 160 ಗಾಯಕರು ಈ ಕಾರ್ಯಕ್ರಮದಲ್ಲಿ ನೋಂದಾಯಿಸಿ ಕೊಂಡಿದ್ದಾರೆ. ಏಳು ದಿನಗಳ ಕಾಲ ಪ್ರತಿದಿನ 24 ಗಾಯಕರು ಹಾಡಲಿದ್ದಾರೆ. ದಾಸ ಸಾಹಿತ್ಯದ ಗಾಯನದ ಜತೆಗೆ ಅದರ ಅರ್ಥ ಮತ್ತು ಅದರ ಒಳಹರವು ಅರ್ಥ ಮಾಡಿಕೊಂಡು ಅದರಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ ಎಂದರು.

ವಿದ್ಯಾಭೂಷಣರನ್ನು ಪರಿಚಯಿಸಿದ ಜಿಲ್ಲೆಯ ಮುಜರಾಯಿ ಇಲಾಖೆಯ ನಿವೃತ್ತ ಮುಖ್ಯಸ್ಥ ಸಂಪತ್ ಕುಮಾರ್ ಸರಳಾಯರು ವಿದ್ಯಾಭೂಷಣರು ದಾಸ ಸಾಹಿತ್ಯದ ಹರಿಕಾರ, ದಾಸರಪದಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಜನರ ಮನ ಮತ್ತು ಮನೆಗೆ ತಲುಪಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ 22 ಗಾಯಕರು ದಾಸರ ರಚಿಸಿದ ವಿವಿದ ಹಾಡುಗಳನ್ನು ಹಾಡಿದರು.
ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ,ಬಳಗದ ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, , ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಕೆ.ಎಂ.ಶ್ವೇತ, ಬಿ.ಆರ್.ಜೋಯಪ್ಪ, ರಾಜಲಕ್ಷ್ಮಿ ಗೋಪಾಲಕೃಷ್ಣ, ಡಾ. ದುರ್ಗಾ ಪ್ರಸಾದ್, ಮನೆ ಮನೆ ಕವಿಗೋಷ್ಟಿಯ ವೈಲೇಶ್, ಡಾ. ಕಾವೇರಿ ಪ್ರಕಾಶ್, ವಹಿದ್ ಜಾನ್, ಹಾತಿ ಜಯಪ್ರಕಾಶ್, ರಂಜಿತ್ ಕೆ.ಯು, ಪ್ರತಿಮಾ ರೈ, ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದು 300ಕ್ಕೂ ಹೆಚ್ಚು ಗಾನಪ್ರಿಯರು ವೀಕ್ಷಿಸಿದರು.
ಬಳಗದ ನಿರ್ದೇಶಕ ಲೋಕನಾಥ್ ಅಮೆಚೂರ್ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಅಂಬೆಕಲ್ ನವೀನ್ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಪುದಿನೆರವನ ರೇವತಿ ರಮೇಶ್ ವಂದಿಸಿದರು.

error: Content is protected !!