ಕೊವಿಡ್ ಸೆಂಟರ್ ಮೊಬೈಲ್ ಕಳುವು ಪ್ರಕರಣ: ಉಷಾ ತೇಜಸ್ವಿ ಕುಟುಂಬಸ್ಥರಿಂದ ದೂರು

ಕೊಡಗು: ಮೇ 7ರಂದು ಚಿಕಿತ್ಸೆ ಫಲಕಾರಿಯಾಗದೆ ಮಡಿಕೇರಿ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಸಮಾಜಸೇವಕಿ ಹಾಗು ಬಿಜೆಪಿಯ ನಾಯಕಿಯಾಗಿದ್ದ, ಉಷಾ ತೇಜಸ್ವಿ ರವರ ಮೊಬೈಲ್ ದೊರೆಯದಿರುವ ಕಾರಣ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಆಸ್ಪತ್ರೆಯಲ್ಲಿ ಮೃತಪಟ್ಟವರಿಗೆ ಸೇರಿದ 10 ಮೊಬೈಲ್ ಗಳು ಇದೆ ಎಂದು ಮಾಹಿತಿ ಅರಿತು, ಸಾಕಷ್ಟು ದಾಖಲೆಗಳನ್ನು ಹೊಂದಿದ್ದ ಉಷಾ ತೇಜಸ್ವಿ ಮೊಬೈಲ್ ನೀಡುವಂತೆ ಅವರ ಅಳಿಯ ನಿರಂಜನ್ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.