ಕೊವಿಡ್ ಆಸ್ಪತ್ರೆಯಲ್ಲಿನ ಕಳ್ಳತನ ಪ್ರಕರಣ:ಮಹಿಳಾ ಸಿಬ್ಬಂದಿ ವಶ

ಕೊಡಗು: ಕೊವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಜನಿಕಾಂತ್ ಎಂಬುವವರ ಜೋಬಿನಲ್ಲಿದ್ದ 5,300 ರುಪಾಯಿ ಕಳುವಾಗಿದ್ದು,ರಜನಿಕಾಂತ್ ರವರು ಮೇ 23ರಂದು ಮೃತಪಟ್ಟ ನಂತರ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದ ಸಂಬಂಧ ತನಿಖೆ ಕೈಗೊಂಡ ಪೋಲಿಸರು ಆಸ್ಪತ್ರೆ ಡಿ.ದರ್ಜೆ ಸಿಬ್ಬಂಧಿ ಜೋಡುಪಾಲದ ನಿವಾಸಿ ಲೇಟ್ ಅಬ್ದುಲ್ ರಜಾಕ್ ಪತ್ನಿ ದಿಲ್ ಶಾದ್ (44)ಳನ್ನು ಬಂಧಿಸಲಾಗಿದೆ. ಮೇ 20ರಂದು ಬೆಳಗಿನ ಜಾವ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಳ್ಳಿಯ ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ.