ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ಸೋಮವಾರಪೇಟೆ ತಾಲ್ಲೂಕಿನ ಮಾಲಂಬಿಯಲ್ಲಿ ವ್ಯಕ್ತಿಯನೊಬ್ಬನ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಒಬ್ಬಂಟಿಯಾದ ಚಂದ್ರ (35) ಎಂಬಾತ ಮೃತದೇಹ ಆತನ ಮನೆಯಲ್ಲೇ ಕೊಳೆತ ಸ್ಥಿತಿಯ ರೀತಿಯಲ್ಲಿ ಪತ್ತೆಯಾಗಿದೆ. ಕೊಳೆತು ದುರ್ನಾತ ಬೀರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಲಗಿದ್ದ ಸ್ಥಿತಿಯಲ್ಲಿ ಸಾವನಪ್ಪಿರುವುದು ಕಂಡು ಬಂದಿದೆ. ತಮಿಳುನಾಡಿನ ಮೂಲದವರು ಆಗಿರುವ ಕೂಲಿ ಕೆಲಸ ಮಾಡಿಕೊಂಡಿದ್ದ, ಈತ ವಿವಾಹಿತನಾಗಿದ್ದು ಈತನ ಪತ್ನಿ ಆಕೆಯ ತವರು ಮನೆಯಲ್ಲಿದ್ದಳು ಎನ್ನಲಾಗಿದೆ. ಸದ್ಯ ಶನಿವಾರಸಂತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.