ಕೊಳಕು ಮಂಡಲ ಹಾವನ್ನು ರಕ್ಷಣೆ ಮಾಡಿದ ಸ್ನೇಕ್ ಸುರೇಶ್

ಸಿದ್ದಾಪುರ ಗ್ರಾಮ ಪಂಚಾಯಿತಿಯ ವಾರ್ಡ್ ಸದಸ್ಯರಾದ ಜಾಫರ್ ಅಲಿ ಅವರು ಮೈಸೂರ್ ರಸ್ತೆಯ ಬಡಾವಣೆಯಲ್ಲಿ ಹಾವು ಇರುವುದು ಕಂಡು ಬಂದು ಅವರು ಗುಹ್ಯ ಗ್ರಾಮದ ಸ್ನೇಕ್ ಸುರೇಶ್ ಅವರಿಗೆ ವಿಷಯ ತಿಳಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸುರೇಶ್ ಅವರು ತುಂಬಾ ಕಾಡು ಕಲ್ಲು ಇದಿದ್ದರಿಂದ ಹಾವನ್ನು ರಕ್ಷಣೆ ಮಾಡಲು ತುಂಬಾ ಕಷ್ಟವಾಯಿತು. ಮೂರು ದಿನದ ಸತತ ಪ್ರಯತ್ನದ ನಂತರ ಇಂದು ನಾಲ್ಕನೇ ದಿನ ಜೆಸಿಬಿಯನ್ನು ಬಳಸಿಕೊಂಡು ಜೆಸಿಬಿಯ ಮುಖಾಂತರ ಕಾಡು ಕಲ್ಲುಗಳನ್ನು ತೆರವುಗೊಳಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಆನಂತರ ಈ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ಸ್ನೇಕ್ ಸುರೇಶ್ ಅವರು ಮಾಹಿತಿ ನೀಡಿದ್ದಾರೆ.