ಕೊಳಕು ಮಂಡಲ ಸೆರೆ

ಕೊಡಗು: ಕಾಫಿ ತೋಟದ ಕುರುಚಲು ಪ್ರದೇಶದಲ್ಲಿ ಸದ್ದಿಲ್ಲದೆ ಅವಿತು ದಾಳಿ ಮಾಡುವ ಕೊಳಕುಮಂಡಲ ಹಾವೊಂದು ಆತಂಕ ಸೃಷ್ಠಿ ಮಾಡಿದ ಘಟನೆ ಏಳನೇ ಹೋಸಕೋಟೆಯ ರಾಬರ್ಟ್ ಎಸ್ಟೇಟ್ ನಲ್ಲಿ ನಡೆದಿದೆ. ಹಾವನ್ನು ಕಂಡು ಗಾಬರಿಗೊಂಡ ಕಾರ್ಮಿಕರು ತಕ್ಷಣ ತೋಟದ ಮಾಲೀಕರಿಗೆ ತಿಳಿಸಿದ್ದು ಉರಗ ತಜ್ಞ ಬಾಲು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ ಆನೆಕಾಡು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.