fbpx

ಕೊಲಂಬಿಯನ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಳ್ಳತನ

ಗೋಣಿಕೊಪ್ಪ: ನಗರದ ಮಧ್ಯೆ ಭಾಗದಲ್ಲಿರುವ‌
ಬಾರ್ ನ ಬೀಗ ಒಡೆದ ಕಳ್ಳನೊಬ್ಬ ನಗದು ಕಳವಿಗಾಗಿ ವಿಫಲ ಯತ್ನ ನಡೆಸಿದ ಘಟನೆ ತಡರಾತ್ರಿ ನಡೆದಿದೆ.
ನೆಲ್ಲೀರ ಚಲನ್ ಅವರಿಗೆ ಸೇರಿದ ಕೊಲಂಬಿಯನ್ ಬಾರ್ ಮತ್ತು ರೆಸ್ಟೋರೆಂಟ್ ರಾತ್ರಿ 12 ಗಂಟೆವರೆಗೂ ಮದ್ಯ ಮಾರಾಟ ಮಾಡುತ್ತಿದ್ದು ನಿನ್ನೆ ರಾತ್ರಿ 11.45 ಕ್ಕೆ ಮುಚ್ಚಲಾಗಿತ್ತು. ಇಂದು ಬೆಳಿಗ್ಗೆ 6 ಗಂಟೆಗೆ ಹೋಟೆಲ್ ನೌಕರರು ಬಂದು ನೋಡಿದಾಗ ಹಿಂಭಾಗದ ಗೇಟ್ ನ ಬೀಗ ಹಾಗೂ ಮುಂಭಾಗದ ಶೆಟರ್ ನ
ಬೀಗವನ್ನು ಕಳ್ಳನೊಬ್ಬ ಒಡೆದು ಹಾಕಿರುವದು ಗೋಚರವಾಗಿದೆ.

ಸಾಧಾರಣವಾಗಿ ಆಯಾಯ ದಿನದ ವ್ಯಾಪಾರದ ನಗದನ್ನು ಮನೆಗೆ ಕೊಂಡೊಯ್ಯಲಾಗುತ್ತಿತ್ತು.ಆದರೆ ನಿನ್ನೆ ರಾತ್ರಿ ಬೆಳಿಗ್ಗೆಯಿಂದ ವ್ಯಾಪಾರವಾದ ನಗದನ್ನು ಕ್ಯಾಷ್ ಕೌಂಟರ್ ನಲ್ಲಿಯೇ ಇಡಲಾಗಿತ್ತು.ಜತೆಗೆ ಅಳವಡಿಸಲಾದ ಸಿಸಿ ಕ್ಯಾಮೆರಾ ಮೂರು ದಿನಗಳ ಹಿಂದೆಯೇ ರೀಪೇರಿಯಾಗಿತ್ತು.

ಈ ಬಗ್ಗೆ ಪೂರ್ವ ಮಾಹಿತಿ ಇರುವ ಚಾಲಾಕಿ ಕಳ್ಳನೇ ಕ್ರತ್ಯ ನಡೆಸಿರಬಹುದು ಎನ್ನಲಾಗಿದೆ.
ರಾತ್ರಿ 1 ಗಂಟೆಯ ನಂತರ ಬಂದ ಕಳ್ಳ ಹೊಸಾ ಸುತ್ತಿಗೆಯ ಸಹಾಯದಿಂದ ಬಾರ್ ಹಿಂಭಾಗಕ್ಕೆ ತೆರಳುವ ಗೇಟ್ ನ ಬೀಗ ಹಾಗೂ ಮುಂಭಾಗದ ಬಾರ್ ನ ಬೀಗವನ್ನು ಹೊಡೆದು ಒಳ ನುಸುಳುವಲ್ಲಿ ಯಶಸ್ವಿಯಾಗಿದ್ದಾನೆ. ಇಂದು ಬೆಳಿಗ್ಗೆ ಮಾಹಿತಿ ತಿಳಿದು ಮಾಲೀಕ ನೆಲ್ಲೀರ ಚಲನ್ ಸ್ಥಳಕ್ಕೆ ಆಗಮಿಸಿ ಗೋಣಿಕೊಪ್ಪಲು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ರಾತ್ರಿ ಪಾಳಯದ ಪೊಲೀಸ್ ಆಗಮನದ ನಂತರ ನಗದು ಕೌಂಟರ್ ಹಾಗೂ ಮದ್ಯವನ್ನು ಪರಿಶೀಲಿಸಿದಾಗ ಯಾವದೂ ಕಳ್ಳತನವಾಗದಿರುವದನ್ನು ನೋಡಿ ಚಲನ್ ಸಮಾಧಾನಗೊಂಡಿದ್ದಾರೆ.ಗೋಣಿಕೊಪ್ಪ ಅಂತರರಾಜ್ಯ ಹೆದ್ದಾರಿ ಹಿನ್ನೆಲೆ ಸಾಕಷ್ಟು ವಾಹನಗಳು ರಾತ್ರಿಯಿಡಿ ಓಡಾಡುತ್ತವೆ.ಯಾವದೋ ವಾಹನ ಬಾರ್ ಮುಂಭಾಗ ನಿಂತ ಶಬ್ಧ ಕೇಳಿಯೋ ಅಥವಾ‌ ಯಾರೋ ಸುಳಿದಾಡುವದನ್ನು ಕಂಡ ಕಳ್ಳ ಬೆದರಿ ಕಳವು ಮಾಡದೆ ಓಡಿರಬಹುದು ಎಂದು ಅಂದಾಜಿಸಲಾಗಿದೆ.ಕಳ್ಳ ಓಡುತ್ತಿರುವ ದ್ರಶ್ಯ ಪಕ್ಕದ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸಮೀಪದಲ್ಲಿಯೇ ಇರುವ ಕಾಮತ್ ನವಮಿ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು ಎನ್ನಲಾಗಿದೆ.

ಆಗಂತುಕ ಓಡುವ ಆತುರದಲ್ಲಿ ಕೃತ್ಯಕ್ಕೆ ಬಳಸಿದ ಹೊಸ ಸುತ್ತಿಗೆಯನ್ನು ಅಲ್ಲೇ ಬಿಟ್ಟಿರುವದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!