ಕೊರೋನಾ ವಾರಿಯರ್ಸ್ ಗಳಿಗೆ ಅಸಹಕಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಪವನ್ ತೋಟಂಬೈಲು ಅಗ್ರಹ

ಚೆಯ್ಯಂಡಾಣೆ, ಮೇ 14: ಕೋವಿಡ್ ಮಹಾಮಾರಿಯ ವಿರುದ್ಧ ಕಳೆದ ಒಂದು ವಷ೯ದಿಂದ ತಮ್ಮ ಅಮೂಲ್ಯ ಜೀವನವನ್ನು ಒತ್ತೆಯಿಟ್ಟು ಸೇವಾ ರಂಗದಲ್ಲಿರುವ ಕೊರೋನಾ ವಾರಿಯರ್ಸ್ ಗಳಾದ ಅರೋಗ್ಯ ಸಿಬ್ಬಂದಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು,ಸಂಘ ಸಂಸ್ಥೆಗಳು ಅವಿರತ ದುಡಿಯುತ್ತಿದ್ದಾರೆ. ಆದರೆ ಇದಾವುದರ ಪರಿವೆ ಇಲ್ಲದ ಕೆಲವರು ಸರಕಾರದ ಕೋವಿಡ್ ನಿಯಮಗಳನ್ನು ನಿರ್ಲಕ್ಷಿಸಿ, ಪರೋಕ್ಷವಾಗಿ ಕೊರೋನಾ ಹರಡಲು ಕಾರಣರಾಗುತ್ತಿದ್ದಾರೆ. ಇಂತವರ ದುರ್ವರ್ತನೆಯಿಂದ ಕೊರೋನಾವನ್ನು ನಿಯಂತ್ರಿಸಲು ವರ್ಷಗಳು ಒಂದು ಸವೆದರು ಅಸಾಧ್ಯವಾಗಿದೆ. ಅದರಿಂದ ಮಾನ್ಯ ಜಿಲ್ಲಾಡಳಿತ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕ್ರಿಮಿನಲ್ ಕೇಸ್ ದಾಖಲಿಸ ಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಪವನ್ ತೋಟಂಬೈಲು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

error: Content is protected !!