ಕೊರೋನಾ ನಿಯಮಗಳ ಪಾಲನೆಗೆ ಪರಿಶೀಲನೆ; ದಂಡ ನೀಡಲು ವರ್ತಕರ ವಿರೋಧ

ಕೋವಿಡ್ ನಿಯಮ ಉಲ್ಲಂಘಿಸಿದ ವರ್ತಕರಿಗೆ ಬಿಸಿ ಮುಟ್ಟಿಸಿದ ಕುಶಾಲನಗರ ಪಟ್ಟಣ ಪಂಚಾಯ್ತಿ ಇಂದು ಸಂತೆಯಲ್ಲಿ ಮಾಸ್ಕ್ ಬಗ್ಗೆ ಪರಿವೇ ಇಲ್ಲದೆ ಬಹುತೇಕ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದರು.

ಮಾಸ್ಕ್ ಧರಿಸದ ವರ್ತಕರಿಗೆ ಎಚ್ಚರಿಕೆ ನೀಡಿ, ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸಲು ಮುಂದಾದರು. ಪಟ್ಟಣ ಪಂಚಾಯ್ತಿಯ ಅಧಿಕಾರಿಗಳ ದಿಢೀರ್ ಭೇಟಿಯಿಂದ ಕಂಗಾಲಾದ ವರ್ತಕರು ಹಣವಿಲ್ಲದೆ, ಈಗಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವುದರಿಂದಾಗಿ ದಂಡ ನೀಡಲು ನಕಾರ ವ್ಯಕ್ತಪಡಿಸಿದರು. ಆರ್.ಐ ಸದಾಶಿವಮೂರ್ತಿ ನೇತೃತ್ವದಲ್ಲಿ ರಿಯಾಲಿಟಿ ಚೆಕ್ ನಡೆದಿತ್ತು.