ಕೊರೋನಾ ಕಾಡಿದರೆ 15 ದಿನ ರಜೆ ಸಿಗಲಿದೆ

ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕುಟುಂಬಸ್ಥರಿಗೆ ಕೊರೊನಾ ಕಾಡಿದಲ್ಲಿ ಅವರ ಆರೈಕೆಗೆ ಕೇಂದ್ರ ಸರ್ಕಾರಿ ನೌಕರರು ರಜೆ ಪಡೆಯಬಹುದು. 15 ದಿನಗಳ ರಜೆ ನೀಡುವಂತೆ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಎಸಿಎಲ್ ಕೊನೆಗೊಂಡರೆ ಅಂದ್ರೆ 15 ದಿನಗಳ ರಜೆ ನಂತ್ರವೂ ಕುಟುಂಬಸ್ಥರು ಸೋಂಕಿಗೊಳಗಾಗಿದ್ದು ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಆ ನೌಕರರಿಗೆ 15 ದಿನಗಳಿಗಿಂತ ಹೆಚ್ಚು ರಜೆ ವಿಸ್ತರಿಸಲಾಗುವುದು. ಕೊರೊನಾ ಸೋಂಕು ಕಡಿಮೆಯಾಗುವವರೆಗೆ ರಜೆ ನೀಡಲು ಅವಕಾಶ ನೀಡಬಹುದೆಂದು ಸಿಬ್ಬಂದಿ ಸಚಿವಾಲಯ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಚಿಕಿತ್ಸೆ, ಆಸ್ಪತ್ರೆಗೆ ದಾಖಲು, ಪ್ರತ್ಯೇಕತೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸಚಿವಾಲಯ ವಿವರವಾದ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಗಮನದಲ್ಲಿರಿಸಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅವರಿಗೆ 20 ದಿನಗಳವರೆಗೆ ರಜೆ ನೀಡಬಹುದು ಎಂದು ಸರ್ಕಾರ ಹೇಳಿದೆ. 20 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರೆ, ದಾಖಲೆ ನೀಡಿ ಹೆಚ್ಚಿನ ರಜೆ ಪಡೆಯಬಹುದಾಗಿದೆ.

error: Content is protected !!