ಕೊರೋನಾ ಎರಡನೇ ಅಲೆ ತಡೆಯಲು ಚೀನಾ ನೀಡುತ್ತಂತೆ ಸಹಕಾರ!

ಬಿಜಿಂಗ್: ಭಾರತದಲ್ಲಿ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಆರೋಗ್ಯ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕರೊನಾ ತಡೆಗಟ್ಟಲು ಭಾರತಕ್ಕೆ ಸಹಾಯ ಮಾಡುವುದಾಗಿ ಚೀನಾ ಹೇಳಿದೆ.

ಈ ಕುರಿತು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಚೀನಾ ಸ್ಟೇಟ್ ಮೀಡಿಯಾ ಗುರುವಾರ ಪ್ರಕಟಿಸಿದೆ. ಪ್ರಸ್ತುತ ಭಾರತದಲ್ಲಿ ಎದುರಾಗಿರುವ ಕರೊನಾ ಎರಡನೇ ಅಲೆಯ ಬಿಕ್ಕಟ್ಟನ್ನು ಎದುರಿಸಲು ನಾವು ಭಾರತಕ್ಕೆ ಸಹಾಯ ಮಾಡಲು ಸಿದ್ದರಿದ್ದೇವೆ. ಅಲ್ಲದೇ ವೈದ್ಯಕೀಯ ಉಪಕರಣಗಳನ್ನು ನೀಡಲು ಸಿದ್ದರಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್​ಬಿನ್ ಹೇಳಿರುವುದಾಗಿ ವರದಿಯಾಗಿದೆ.

ಕೋವಿಡ್19 ವೈರಸ್ ಪ್ರಪಂಚದ ಎಲ್ಲರಿಗೂ ಸಾಮಾನ್ಯ ವೈರಿಯಾಗಿದೆ. ಇದನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಸಮುದಾಯಗಳು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ವಾಂಗ್ ವೆನ್ಬಿನ್ ಹೇಳಿದ್ದಾರೆ.

ಅಲ್ಲದೇ ಕಳೆದ ವರ್ಷ ಚೀನಾ ಕೋವಿಡ್​ ವಿರುದ್ಧದ ಹೋರಾಟದ ಅಂಗವಾಗಿ ಲಕ್ಷಾಂತರ ವೆಂಟಿಲೇಟರ್​​ಗಳನ್ನು ಭಾರತಕ್ಕೆ ಕಳಿಸಿತ್ತು. ಭಾರತದಲ್ಲಿ ಗುರುವಾರ 3.5 ಲಕ್ಷ ಜನರಿಗೆ ಕರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಸುಮಾರು 2500 ಜನ ಮೃತಪಟ್ಟಿದ್ದಾರೆ.

error: Content is protected !!