ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ಕೆಲಸ ಮಾಡಿಸಿಕೊಂಡ ವೈದ್ಯ:ತಡವಾಗಿ ಬೆಳಕಿಗೆ ಬಂದ ಪ್ರಕರಣ

ಕೊಡಗು:ಕೊರೊನಾ ಪಾಸಿಟಿವ್ ನಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಅದೇ ಆಸ್ಪತ್ರೆಯ ವೈದ್ಯ ಕರ್ತವ್ಯ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಲ್ಯಾಬ್ ಟೆಕ್ನಿ಼ಷಿಯನ್ ಎರಡೆರೆಡು ಬಾರಿ ಪರೀಕ್ಷಿಸಿದ್ದ ಸಂದರ್ಭ ಪಾಸಿಟಿವ್ ಬಂದಿರುವ ಬಗ್ಗೆ ವೈದ್ಯ ಡಾ. ಜೀವನ್ ರಿಗೆ ತಿಳಿದಿದ್ದರು ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣ ಕ್ವಾರಂಟೈನ್ ನ ಅಲಿದ್ದ ಸೋಂಕಿತ ಟೆಕ್ನಿಷಿಯನ್ ನನ್ನು ಕರೆಸಿ ಕೆಲಸ ಮಾಡಿಸಿಕೊಳ್ಳಲಾಗಿದೆ. ಇದೇ ಸಮಯದಲ್ಲಿ ಆಸ್ಪತ್ರೆಯಿಂದಲೇ ಸೋಂಕು ಹರಡುತ್ತಿರುವ ಬಗ್ಗೆ ಸುಂಟಿಕೊಪ್ಪ ಗ್ರಾಮಪಂಚಾಯ್ತಿಗೆ ದೂರು ನೀಡಲಾಗಿದ್ದು,ಬಳಿಕ ಪಂಚಾಯ್ತಿ ಸದಸ್ಯರು ಮತ್ತು ಅಧಿಕಾರಿಗಳು ಡಾ.ಜೀವನ್ ಬಳಿ ಪ್ರಶ್ನಿಸಿದ ವೇಳೆ ಉದ್ದಟನ ಪ್ರದರ್ಶಿಸಿದ್ದಾನೆ ಈ ಸಂಬಂಧ ಡಾ.ಜೀವನ್ ವಿರುದ್ದ ಸುಂಠಿಕೊಪ್ಪ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಸೊಂಕಿತ ಟೆಕ್ನಿಷಿಯನ್ ನನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದೆ.

error: Content is protected !!