ಕೊರೊನಾ ತಡೆಗೆ ಜಿಲ್ಲಾಧಿಕಾರಿಗಳ ಹೆಗಲಿಗೆ ಲಾಕ್ ಡೌನ್ ಭವಿಷ್ಯ ನೀಡಲು ಅಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ

ದೇಶದ ವಿವಿಧ ಜಿಲ್ಲೆಗಳು ವಿಭಿನ್ನವಾಗಿದೆ,ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಅರಿವಿರುತ್ತದೆ.ಕೊರೊನಾ ವಿಚಾರದಲ್ಲಿ ನಿಮ್ಮ ಜಿಲ್ಲೆಯ ರಕ್ಷಣೆ ನಿಮ್ಮ ಜವಬ್ದಾರಿ ಹೊತ್ತು ಮುಕ್ತವಾಗಿ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಜಿಲ್ಲೆಗಳ ವರ್ಚುವಲ್ ವೀಡಿಯೋ ಕಾನ್ಫರೇನ್ಸ್ ನಲ್ಲಿ ಮಾತನಾಡಿ ಈ ವಿಚಾರವನ್ನು ತಿಳಿಸಿದರು
ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೇರಿದಂತೆ ರಾಜ್ಯತ ಒಟ್ಟು 17 ಜಿಲ್ಲೆಗಳ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿದ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಜವಬ್ದಾರಿ ನೀಡಿದ್ದಾರೆ.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಸಂವಾದಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಎಲ್ಲಾ ಜಿಲ್ಲೆಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಭಾಷಣದಲ್ಲಿ ಈ ಮಾಹಿತಿ ನೀಡಿದರು.

error: Content is protected !!