ಕೊರೊನಾಕ್ಕೆ ಪೋಲಿಸರು ಬಲಿ

ಹಾಸನ: ಜಿಲ್ಲೆಯ ಪೋಲಿಸ್ ಇಲಾಖೆಯ ಇಬ್ಬರು ಕೋವಿಡ್ 19 ಗೆ ಬಲಿಯಾಗಿದ್ದಾರೆ.ಜಿಲ್ಲೆಯ ವಿವಿದೆಡೆ ಎ.ಎಸ್.ಐ.ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ
ಬಡಾವಣೆ ಠಾಣೆಯ ಎ.ಎಸ್‌.ಐ. ಬಾಲಕೃಷ್ಣ (59) ಹಾಗೂ ಗೊರೂರು ಠಾಣೆಯ ಎ.ಎಸ್.ಐ‌. ದೊರೆಸ್ವಾಮಿ (57) ಮೃತಪಟ್ಟವರು.ಮೃತ ದೊರೆಸ್ವಾಮಿ ಇತ್ತೀಚೆಗೆ ಎ.ಎಸ್.ಐ. ಆಗಿ ಬಡ್ತಿ ಪಡೆದು ಗೊರೂರು ಠಾಣೆಗೆ ವರ್ಗಾವಣೆಗೊಂಡಿದ್ದರು.

ಇಬ್ಬರಿಗೂ ಕೊರೊನ ಸೋಂಕು ತಗುಲಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನಪ್ಪಿದ್ದಾರೆ.

error: Content is protected !!