fbpx

ಕೊರೊನದ ನಡುಲಿ ಕೃಷಿ ಚಟುವಟಿಕೆ..

🖊ಮೊನಿಕ ಪ್ರಕಾಶ್ ಮೂಲೆಮಜಲು


ಕೃಷಿ ಪ್ರಧಾನವಾದ ನಮ್ಮ ದೇಶದ ಅರ್ಥಿಕ ಸ್ಥಿತಿ ಕೂಡ ತುಂಬಾ ಕೆಳಮಟ್ಟಕ್ಕೆ ಬಂದುಟ್ಟು, ಯಾರ್ ಕೂಡ ಇಂತಹ ಪರಿಸ್ಥಿತಿ ಬಂದದೆತಾ ಯೋಚನೆ ಕೂಡ ಮಾಡಿತ್ಲೆ, ಇದ್ಕೆಲ್ಲ ಕಾರಣ ಮಾಹಾಮಾರಿ “ಕೊರೊನಾ” ತೇಳುವ ಕಾಯಿಲೆ, ಪ್ರಪಂಚದ ಯಾವುದೋ ದೇಶಲಿ ಕೊರೊನ ತೇಳುವ ಕಾಯಿಲೆ ಸುರ್ ಆಗುಟ್ಟು ಗಡ ತೇಳಕನ ಇದ್ ನಮ್ಮ ದೇಶಕ್ಕೆ ,ರಾಜ್ಯಕ್ಕೆ, ಜಿಲ್ಲೆಗೆ ಹೋಗಲಿ ನಮ್ಮ ಊರಿಗೆ ಬಂದದೆತಾ ಯಾರ್ ಕೂಡ ಕಲ್ಪನೆ ಮಾಡಿತ್ಲೆ.


ಆದರೆ ಇದಿಗ ನಮ್ಮರಾಜ್ಯಾದ್ಯಂತ ಕೊರೊನಾ ಮಾಹಾಮಾರಿ ದಿನಂದ ದಿನಕ್ಕೆ ಹೆಚ್ಚಾಗ್ತಾ ಉಟ್ಟು ಸೊಕಿಂತರ ಸಂಖ್ಯೆ ಕೂಡ ಮಿತಿ ಮೀರಿ ಹೊಗ್ತಾ ಇದ್ , ಸಾವಿನ ಸಂಖ್ಯೆಲಿ ಅಪಾರ ಏರಿಕೆ ಆಗ್ತಾ ಉಟ್ಟು, ಗಲ್ಲಿ ಗಲ್ಲಿಲೂ ಕೊರೊನಾ ಪ್ರಕರಣಗ ಬೆಳಕಿಗೆ ಬರ್ತಾ ಇರ್ದು ಆಶ್ಚರ್ಯ!


ಇಷ್ಟರ ತನಕ ಸದ್ ಇಲ್ಲದ ನಮ್ಮ ಕೊಡಗುಲಿ ಕೊರೊನಾದೆ ಶಬ್ದ , ಎಲ್ಲಿ ನಮ್ಮ ಊರಿಗೆ , ಗ್ರಾಮಕ್ಕೆ ಯಾಗ ,ಹೆಂಗೆ ಬಂದದೆತಾ ಆತಂಕದ ಪರಿಸ್ಥಿತಿಲಿ ಜೀವನ ಮಾಡುವಂಗೆ ಆಗುಟ್ಟು.


ಕೃಷಿ ಚಟುವಟಿಕೆ


ಸಣ್ಣ ಜಿಲ್ಲೆಯಾದ ಕೊಡಗು ಪ್ರಕೃತಿ ಸೌಂದರ್ಯದ ಜೊತೆಗೆ ಮಳೆಗೂ ಅಷ್ಟೇ ಹೆಸರ್ ವಾಸಿ, ಹಿಂದೆ ಮುಂಗಾರ್ ಮಳೆ ಸುರ್ ಆತ್ ತೇಳಕನ ಜನ ಸಂಭ್ರಮ ಪಡ್ತಾ ಇದ್ದೊ , ಕಳೆದ ಎರಡ್ ವರ್ಷ ನಡ್ದ ಘಟನೆಗಳ ನೆನ್ಪು ಮಾಡಿಕಂಡ್ರೆ ನಿಂತಲ್ಲೇ ನಡ್ಕ ಸುರು ಅದೆ,ಇಡಿ ಕೊಡಗು ಅಲ್ಲೋಲ, ಕಲ್ಲೋಲ ಅತ್, ನಮ್ಮ ಕೊಡಗಿನ ಇತಿಹಾಸಲೆ ಇಂತಹಾ ಘಟನೆಗ ನಡ್ದಿತ್ಲೆ, ಇನ್ ಈ ವರ್ಷದ ಪರಿಸ್ಥಿತಿ ಯೋಚನೆ ಮಾಡುವಂಗೆ ಇಲ್ಲೆ , ಮಳೆರಾಯನ ರಭಸದ ಜೊತೆಗೆ ಕೊರೊನದ ಆರ್ಭಟ ಬೇರೆ, ವರ್ಷಂದ ವರ್ಷಕ್ಕೆ ಮೈ ಮೇಲೆ ಬರೆ ಎಳಿತಾ ಉಟ್ಟು.

ಇದಿಗ ಜಿಲ್ಲೆಯಾದ್ಯಂತ ಮುಂಗಾರ್ ಮಳೆ‌ ಸುರ್ ಆಗಿದ್ ಈ ವರ್ಷ ಕೂಡ ಕಾವೇರಮ್ಮ ನೀನೆ ಕಾಪಡಕುಂತ್ತಾ ರೈತರ್ ಆತಂಕಲೆ ಗದ್ದೆ ಹೂಡಿಕೆ, ಏಲಕ್ಕಿ ತೋಟಲಿ ಕಚ್ಚಡ, ಹಿಂಗೆ ಹತ್ ಹಲವಾರ್ ಕೃಷಿ ಚಟುವಟಿಕೆಲಿ ತೊಡಗಿಕೊಂಳೊ, ಈ ವರ್ಷ ಆದ್ರೂ ರೈತರ ಕಷ್ಟಕ್ಕೆ ಫಲ ಸಿಕ್ಕಲಿ ತೇಳ್ದೆ ನಮ್ಮೆಲ್ಲರ ಆಶಯ.
ಧನ್ಯವಾದಗ.


🖊ಮೊನಿಕ ಪ್ರಕಾಶ್ ಮೂಲೆಮಜಲು

error: Content is protected !!