fbpx

ಕೊರವೇ ಮೇಲೆ ನಗರ ಠಾಣೆಯಲ್ಲಿ ಆರೋಪ ಪಟ್ಟಿ ದಾಖಲು

ಕೊಡಗು: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಿದ ಹಿನ್ನೆಲೆ ಕೊಡಗು ರಕ್ಷಣಾ ವೇದಿಕೆಯ ವಕೀಲ ಪವನ್ ಪೆಮ್ಮಯ್ಯ ಸೇರಿ 7 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ.

ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ನೇತೃತ್ವದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಆಸ್ಪತ್ರೆ ದಿನಗೂಲಿ ನೌಕರರು ಕನಿಷ್ಟ ವೇತನ, ಸೇವಾ ಭದ್ರತೆಗೆ ಬೇಡಿಕೆ ಇಡಲಾಗಿತ್ತು. ಪವನ್  ಪೆಮ್ಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಅದೇ ವಿಷಯಕ್ಕೆ  ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

error: Content is protected !!