ಕೊರಂಗಾಲ-ಚೇರಂಗಾಲದಲ್ಲಿ ಮುನ್ನೆಚ್ಚರಿಕೆ

ಕೊಡಗು: ತಲಕಾವೇರಿಯಲ್ಲಿನ ಗಜಗಿರಿ ಬೆಟ್ಟ ಕುಸಿತದ ಪರಿಣಾಮ ಸಾಕಷ್ಟು ಆಸ್ತಿಪಾಸ್ತಿ ಉಂಟಾಗಿದ್ದ ಬೆಟ್ಟದ ತಪ್ಪಲಿನ ಕೋರಂಗಾಲ ಮತ್ತು ಚೇರಂಗಾಲ ಗ್ರಾಮದ ಸುತ್ತಮುತ್ತ ಭಾಗಮಂಡಲ ಗ್ರಾಮಪಂಚಾಯ್ತಿ ಸಿಬ್ಬಂದಿಗಳು ಮೇ 14ರಿಂದ ಸಂಭಿವಿಸಬಹುದಾದ ಹವಮಾನ ವೈಪರಿತ್ಯ ಮತ್ತು ಅನಾಹುತಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಮುಂಜಾಗೃತವಾಗಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಖುದ್ದು ಗ್ರಾಮಕ್ಕೆ ತೆರಳಿ ಮೈಕ್ ಮೂಲಕ ಅನೌಂಸ್ಮೆಂಟ್ ಮಾಡಲಾಗುತ್ತಿದೆ.