fbpx

ಕೊಡವ ರೈಡರ್ಸ್ ತಂಡದಿಂದ ಶ್ರಮಾದಾನ

ಕೊಡವ ರೈಡರ್ಸ್ ತಂಡದಿಂದ ನಲ್ಲೂರು ದೇವರಕಾಡಿನಲ್ಲಿ ಶ್ರಮದಾನ ನಡೆಸಿದರು.

ಬಿದಿರು ಸಸಿ ನೆಡುವ ಮೂಲಕ ನಲ್ಲೂರು ಅಯ್ಯಪ್ಪ ದೇವರಕಾಡು ಅರಣ್ಯ ವಲಯಕ್ಕೆ ಸೇರಿದ ದೇವರಕಾಡು ಸುಮಾರು 1.58 ಎಕರೆ ವಿಸ್ತೀರ್ಣವಿರುವ ಪ್ರದೇಶದಲ್ಲಿ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷರು ಪದಾಧಿಕಾರಿಗಳು, ರೈತ ಸಂಘದ ಪ್ರಮುಖರು ಮೊದಲು ಅಯ್ಯಪ್ಪ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೂಪ, ಕರಿಮರ , ಕುಂಬಳಿ, ಸೀಬೆ,‌ ಮಾವು, ನೇರಳೆ, ಹಲಸು, ಆಲ, ಶ್ರೀಗಂಧ, ಮತ್ತಿ, ಬೀಟೆ, ಅಶೋಕ, ಅರಳಿ ಇತ್ಯಾದಿ ಸಸಿಗಳು 400ಕ್ಕೂ ಅಧಿಕ ಗಿಡಗಳನ್ನು ನಲ್ಲೂರು ದೇವರಕಾಡುವಿನಲ್ಲಿ ಕೊಡವ ರೈಡರ್ಸ್ ಕ್ಲಬ್, ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಘಟಕ, ಅರಣ್ಯ ಇಲಾಖೆ,ಪೊನ್ನಂಪೇಟೆ ಮತ್ತು ನಲ್ಲೂರು ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

error: Content is protected !!