ಕೊಡವ ರೈಡರ್ಸ್ ಕ್ಲಬ್ ವನಮಹೋತ್ಸವ

(Kodava Riders Club Plantation Drive 2021)

ಕೊಡವ ರೈಡರ್ಸ್ ಕ್ಲಬ್ ಮುಂದಾಳತ್ವದಲ್ಲಿ ನಲ್ಲೂರು ಗ್ರಾಮಸ್ಥರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಶಾಖೆಯ ಸಹಾಕಾರದೊಂದಿಗೆ ನಲ್ಲೂರು ಗ್ರಾಮದ ದೇವರ ಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿದ್ದು, ಇದೇ ಜುಲೈ 31ರಂದು ಶನಿವಾರ ಈ ಕಾರ್ಯಕ್ರಮ ಜರುಗಲಿದೆ.

ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ನಿನ್ನೆ ನಲ್ಲೂರಿನ ಮಹಾದೇವರ ದೇವಸ್ಥಾನದಲ್ಲಿ ಕೊಡವ ರೈಡರ್ಸ್ ಕ್ಲಬ್, ಕರ್ನಾಟಕ ರಾಜ್ಯ ರೈತ ಸಂಘ, ನಲ್ಲೂರು ಗ್ರಾಮಸ್ಥರು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಪುಚ್ಚಿಮಾಡ ಲಾಲಾ ಪೂಣಚ್ಚ ವಹಿಸಿದ್ದರು, ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಶಾಖೆಯ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕರಾದ ಪುಚ್ಚಿಮಾಡ ಸುಭಾಷ್, ಕೊಡವ ರೈಡರ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾದ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಸ್ಥಾಪಕರಾದ ಸಣ್ಣುವಂಡ ದರ್ಶನ್ ಕಾವೇರಪ್ಪ, ಪದಾಧಿಕಾರಿಗಳಾದ ಅಪ್ಪಂಡೆರಂಡ ದೇವಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಕನಿಷ್ಠ ಮೂರು ವರ್ಷಗಳ ಕಾಲ ಪಾಲನೆ ಮಾಡುವ ಬಗ್ಗೆ ನಿರ್ಣಯಿಸಿದರು.

ಸಭೆಯಲ್ಲಿ ಕೊಡವ ರೈಡರ್ಸ್ ಕ್ಲಬ್ ಸಮಿತಿ ಸದಸ್ಯರಾದ ಮುರುವಂಡ ಸುಮ ಕುಟ್ಟಪ್ಪ, ಬೊಮ್ಮಂಡ ರೋಶನ್ ಕಾರ್ಯಪ್ಪ, ಪೊನ್ನಚಂಡ ಅನೀಶ್ ಕಾರ್ಯಪ್ಪ, ಮೊಣ್ಣಂಡ ಗಗನ್, ಗುಡಿಯಂಗಡ ಲಿಕಿನ್, ಪುಟ್ಟಂಗಡ ಸೂರಜ್, ಕರ್ನಾಟಕ ರಾಜ್ಯ ರೈತ ಸಂಘ ಪೊನ್ನಂಪೇಟೆ ಹೋಬಳಿ ಅಧ್ಯಕ್ಷರಾದ ಆಲೆಮಾಡ ಮಂಜುನಾಥ್, ನಲ್ಲೂರು ಗ್ರಾಮದ ಅಧ್ಯಕ್ಷರಾದ ತೀತರಮಾಡ ರಾಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!