ಕೊಡಗು Quick Roundup

ಕುಶಾಲನಗರ ವ್ಯಾಪ್ತಿಯಲ್ಲಿ ಅಳಿಲು ಸೇವಾ ತಂಡದ ಮತ್ತೊಂದು ಮೈಲು ಗಲ್ಲು ಸ್ಥಾಪಿಸಿದೆ.ಕಳೆದ ಒಂದು ತಿಂಗಳಿನಿಂದ ಕಷ್ಟದಲ್ಲಿ ಇರುವ ನೆರವಿಗೆ ನಿಂತಿರುವ ಮಂಗಳ ಮುಖಿಯರಿಗೂ ಆಹಾರದ ಕಿಟ್ ನೀಡಿದರು.
ಕೋವಿಡ್ ನಿಂದ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆಗೆ ದಾನಿಗಳಿಂದ ಸೌದೆಗಳು ಕುಶಾಲನಗರದ ಸೇವಾಭಾರತಿ ತಂಡಕ್ಕೆ ಹರಿದುಬರುತ್ತಿದ್ದು,ಸೇವಕರು ನಿರತರಾಗಿರುವುದು.
ಗ್ರಾಮೀಣಾಭಿವೃದ್ದಿ ಯೋಜನೆಯಡಿಯಲ್ಲಿ ಮಾದಾಪುರ ಗ್ರಾಮ ಪಂಚಾಯ್ತಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು.
ನೆಲ್ಯುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರಡಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆರೆಬದಿಯ ಹೂಳು ತೆಗೆಯುವ ಕಾರ್ಯ ನಡೆಸಲಾಯಿತು.
ಕಾಕೋಟುಪರಂಬು ಗ್ರಾಮಪಂಚಾಯ್ತಿಗೆ ನರೇಗಾ ಯೋಜನೆಯಡಿಯಲ್ಲಿ ಕದನೂರಿನಿಂದ ಸಸ್ಯಗಳ ರವಾನೆ.
ಶರಣ ಸಾಹಿತ್ಯ ಪರಿಷತ್ತು ವತಿಯಿಂದ ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಮಹಾಲಿಂಗ ಸ್ವಾಮಿಗಳಿಂದ ಬಡಬಗ್ಗರು, ನಿರ್ಗತಿಗರಿಗೆ ಊಟ, ದಿನಸಿ ವಿತರಿಸಿದ ದಾನಿಗಳನ್ನು ಗೌರವಿಸಲಾಯಿತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ನಿಗದಿಯಂತೆ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಟಾಸ್ಕ್ ಫೋರ್ಸ್ ಸಭೆ ನಡೆಸಿದರು.
ಮಡಿಕೇರಿ ನಗರದ ಹಿಂದೂರುದ್ರಭೂಮಿಗೆ ಜಿಲ್ಲಾಧಿಕಾರಿಯ ಆದೇಶದಂತೆ ತುರ್ತಾಗಿ 500 ಮೀಟರ್ ಅಂತರದ ರಸ್ತೆ ಕಾಮಗಾರಿ ಆರಂಭವಾಗಿದ್ದು,ಜೊತೆಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿನ ಆಕ್ಸಿಜನ್ ಕನ್ವರ್ಟರ್ ಪ್ಲಾಂಟ್ ಗೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿದರು,ಇದು ಸಾಮಾನ್ಯ ಗಾಳಿಯಿಂದಲೇ ಪ್ರಾಣವಾಯು ಉತ್ಪಾಧಿಸಲಿದೆ.ಒಂದು ಕೋಟಿ ವೆಚ್ಚದ ಈ ಪ್ಲಾಂಟ್ 100 ಬೆಡ್ ಗಳಿಗೆ ಆಕ್ಸಿಜನ್ ಪೂರೈಸಲಿದೆ.
ಬಿಜೆಪಿ ಯುವ ಮೋರ್ಚದಿಂದ ಸೋಮವಾರಪೇಟೆಯ ಚೌಡ್ಲು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡಲಾಯಿತು.
error: Content is protected !!