ಕೊಡಗು Quick RoundUp

1. ಕೊರೋನಾ ಹೋಗ್ತಿಲ್ಲ,ನೆಟ್ವರ್ಕ್ ಸಿಕ್ತಿಲ್ಲ

ಕೊಡಗು ಜಿಲ್ಲೆಯಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ನೆಟ್ವರ್ಕ್ ನದೇ ದೊಡ್ಡ ಸಮಸ್ಯೆಯಾಗಿದೆ.ಜಿಲ್ಲೆಯ ಗಡಿ ಭಾಗವಾದ ಕರಿಕೆ ಮತ್ತು ಕುಟ್ಟ ಭಾಗದಲ್ಲಿ ಕೇರಳದ ನೆಟ್ವರ್ಕ್ ಮತ್ತು ರಾಜ್ಯದ ನೆಟ್ವರ್ಕ್ ನದು ಕಣ್ಣಮುಚ್ಚಾಲೆ ಒಂದಾದರೆ ಇನ್ನೊಂದೆಡೆ,ಗಾಳಿಬೀಡು,ಬೆಟ್ಟತ್ತೂರು,ಕಾಲೂರು,ಶಾಂತಳ್ಳಿಯಲ್ಲಿ ಅಸಮರ್ಪಕ ವಿದ್ಯುತ್ ನಿಂದ ಟವರ್ ಗಳು ಕಾರ್ಯ ನಿರ್ವಹಿಸದಂತಹಾ ಪರಿಸ್ಥಿತಿ ಇದೆ.ಕೆಲವೆಡೆ ಸೆಟ್ವರ್ಕ್ ಸಿಗುವ ಪ್ರದೇಶದಲ್ಲಿ ಪುಟ್ಟದೊಂದು ಶೆಡ್ ಹಾಕಿಕೊಂಡು ಆನ್ ಲೈನ್ ತರಗತಿ ಪಡೆಯುವ ಅನಿವಾರ್ಯತೆ ಇದೆ.

2. ಜಲಲ.. ಜಲಧಾರೆ…

ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ನದಿ ತೊರೆಗಳು ಉಕ್ಕಿ ಹರಿಯುವುತ್ತವೆ.ಅದರಲ್ಲಿ ಇಲ್ಲಿ ಗಮನ ಸೆಳೆಯುವುದು ಜಲಪಾತಗಳು.ಗಿರಿಕನ್ಯೆ ರೀತಿ ತೊರೆಗಳೆಲ್ಲಾ ಸೇರಿ ಒಂದು ಬೃಹತ್ ಬಂಡೆಕಲ್ಲಿನ ಮೇಲಿಂದ ಧುಮ್ಮಿಕುವ ಪರಿಶುದ್ದ ನೀರಿನ ಜಲಪಾತಗಳು ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಕಡೆ ಕಾಣ ಸಿಗುತ್ತದೆ.ಅಂತಹದರಲ್ಲಿ ಸ್ಥಳೀಯರಿಗಲ್ಲದೆ,ಭಾಹ್ಯ ಪ್ರಪಂಚಕ್ಕೆ ಅಷ್ಟೇನು ಪ್ರಾಚಾರವಿಲ್ಲದ ಈ ಜಲಪಾತವೇ ಈ “ಕೋಟೆ ಅಬ್ಬಿ”.

3.ದಾಸರ ಪದಗಳ ಗಾಯನ

ಕೊಡಗು ಜಿಲ್ಲಾ ‌ಲೇಖಕ ಮತ್ತು ಕಲಾವಿದರ ಬಳಗದಿಂದ ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣ‌ಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ದಾಸರ ಪದಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಾವಗೀತೆ ಮತ್ತು ಜನಪದ ಗೀತ ಗಾಯನ ಬಳಿಕ ಇದೀಗ ದಾಸ ಸಾಹಿತ್ಯದ ಹಾಡುಗಳನ್ನು ಹಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ( ಪುರಂದರ ದಾಸ,ಕನಕದಾಸ ,ವ್ಯಾಸತೀರ್ಥರು,ಶ್ರೀಪಾದರಾಯರು, ಗೋಪಾಲದಾಸ ,ಶ್ರೀ ರಾಘವೇಂದ್ರ ತೀರ್ಥರು, ಹೀಗೆ….) ಕಾರ್ಯಕ್ರಮವು ಪ್ರತಿದಿನ ಒಂದೂವರೆ ಗಂಟೆಗೆ ನಡೆಯಲಿದ್ದು. ದಾಸರು ರಚಿಸಿದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಇದಾಗಿದ್ದು
ಎಲ್ಲರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವವರಿಗೆ ವಯಸ್ಸಿನ ‌ಮಿತಿ‌ ಇರುವುದಿಲ್ಲ.ಆಸಕ್ತರು ಜೂನ್ 26 ರ ಒಳಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ‌ಸಂಪರ್ಕಿಸಿ‌ ನೋಂದಣಿ ಮಾಡಿಕೊಳ್ಳತಕ್ಕದ್ದು.ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ.ಪಿ 9448346276 ಮತ್ತು ಕಾರ್ಯಕ್ರಮದ ಸಂಯೋಜಕರಾದ ಅಂಬೆಕಲ್ ನವೀನ್ 9448005642 ರವರ ಸಂಖ್ಯೆಗೆ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

4.ದೇಣಿಗೆ

ಮಾಯಾಮುಡಿ ಸಮೀಪದ ಧನುಗಾಲ ಗ್ರಾಮದ ಶ್ರೀ ಮುರುಡೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನ್ನದಾಸೋಹ ಭವನಕ್ಕೆ ಆಡಳಿತ ಮಂಡಳಿಯವರ ಕೋರಿಕೆ ಮೇರೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ 1 ಲಕ್ಷ ಮೊತ್ತದ ಚೆಕ್ ನೀಡಿದ್ದಾರೆ.

5. ಬ್ರೈನ್ ಬೂಸ್ಟರ್

ಅಲ್ಲಾರಂಡ ಚಾವಡಿ ಕಲೆಯ ಮೂಲಕ ಕಲಿಕೆ “ಬ್ರೈನ್ ಬೂಸ್ಟರ್” ಎನ್ನುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.30 ಗಂಟೆಗಳ ಆನ್ಲೈನ್ ಕಲಿಕಾ ಕೋರ್ಸ್ ಇದಾಗಿದ್ದು,ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂಗೀತ,ಅಭಿನಯ,ನೃತ್ಯ,ಸಾಹಿತ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ಈ ಕೋರ್ಸ್ ನಡೆಯಲಿದೆ.

6.ಬಾಲಕಾರ್ಮಿಕರುತ್ತಿರುವ ವಿದ್ಯಾರ್ಥಿಗಳು

ಕೋವಿಡ್ 19ರ ನಂತರ ಶಾಲೆಗಳು ಮುಚ್ಚಲ್ಪಟ್ಟು 14 ವರ್ಷದೊಳಗಿನ ಮಕ್ಕಳು ಬಾಲಕಾರ್ಮಿಕರಾಗಿರುವುದು ಆತಂಕಕಾರಿ ವಿಷಯ.ಈಗಾಗಲೇ ಕಾಫಿ ತೋಟದಲ್ಲಿ ಐವರು ಹಾಗು ಒಬ್ಬ ಮನೆಗೆಲಸ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು,ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

7.ಕಲುಶಿತ ಆಹಾರ

ಆಹಾರ ಸುರಕ್ಷಿತಾ ಕ್ರಮ ಉಲ್ಲಂಘಿಸಿ ಕೊರೋನಾ ಸಂದರ್ಭದಲ್ಲಿ ಪಾರ್ಸಲ್ ರೂಪದಲ್ಲಿ ನೀಡುತ್ತಿರುವ ಆಹಾರದ ಬಗ್ಗೆ ಉಸ್ತುವಾರಿ ಸಚಿವ ವಿ.ಸೋಮಣ್ಣರಿಗೆ ಸಾರ್ವಜನಿಕರು ದೂರು ನೀಡಿದ್ದ ಹಿನ್ನಲೆಯಲ್ಲಿ ಮಡಿಕೇರಿ ನಗರದ 4 ಹೋಟೇಲ್ ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

8. ತಲಾ 50 ಲಕ್ಷ ಮಂಜೂರು.

ವಿವಿಧ ವರ್ಗಗಳ ಸಮುದಾಯ ಅಭಿವೃದ್ದಿ ಯೋಜನೆಯಡಿಯಲ್ಲಿ
೧.ಮಡಿಕೇರಿ ಗೌಡ ಸಮಾಜದ ಸಮುದಾಯ ಭವನ
೨.ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ
೩.ಕಾರುಗುಂದ ಗೌಡ ಸಮಾಜದ ಸಮುದಾಯ ಭವನ

೪. ಚೆಟ್ಟಳ್ಳಿ ಗೌಡ ಸಮಾಜದ ಸಮುದಾಯ ಭವನಗಳಿಗೆ ತಲಾ 50 ಲಕ್ಷ ಹೆಚ್ಚುವರಿ ಅನುಧಾನ ಮಂಜೂರು ಮಾಡಿದೆ.

error: Content is protected !!