ಕೊಡಗು Quick RoundUp

ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದಿಂದ ಪ್ರಸಕ್ತ ಸಾಲಿಗೆ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಂದ ಅರ್ಜುನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ವಾಲ್ನೂರಿನಲ್ಲಿ ನಡೆದಿದೆ.ಇಲ್ಲಿನ ಪ್ರಭು ಎಂಬುವವರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆದಿದ್ದು,ಹಸುವಿನ ತೊಡೆ ಭಾಗದಲ್ಲಿ ಗಾಯಗೊಂಡಿದೆ.

ಮಡಿಕೇರಿ ಅಂಚೆ ಕಚೇರಿ ಎದುರಿನ ಹಾಪ್ ಕಾಮ್ಸ್ ಕಟ್ಟಡದ ಕಾಮಗಾರಿ ವಹಿಸಿಕೊಂಡಿರುವ ಮರ್ಕರಾ ಗ್ರೂಪ್ಸ್ ಸಂಸ್ಥೆಯ ಪರವಾನಗಿ ರದ್ದುಗೊಳಿಸುಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.ಮಳೆಯ ಪರಿಣಾಮ ಸ್ಥಳದಲ್ಲಿ ಬರೆ ಕುಸಿತ ಉಂಟಾದ ಪರಿಣಾಮ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿದ್ದು ಕಾನೂನು ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ನೀಡಿದ ಸೂಚನೆ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

ಒಲಂಪಿಯನ್ ಮಿಲ್ಕಾ ಸಿಂಗ್ ರನ್ನೂ ಮೀರಿಸಿ ಮೊದಲನೇ ಸ್ಥಾನ ಪಡೆದವರು ಕೊಡಗಿನ ಅಥ್ಲೇಟ್ ಒಬ್ಬರಿದ್ದರು.ಜಿಲ್ಲೆಯ ಕುನ್ಯಯಂಡ ಅಯ್ಯಣ್ಣ ಸೇನೆಯಲ್ಲಿ ಅವರನ್ನು
100 ಮೀ ಓಟದಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆದ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಅವರ ಹಿತೈಷಿಗಳು ಹಂಚಿಕೊಂಡಿದ್ದಾರೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2834.68 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 8.4 ಮಿ.ಮೀ. ಇಂದಿನ ನೀರಿನ ಒಳಹರಿವು 1265 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 46.77 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 64.32 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.45 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.53 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 32.4, ಸಂಪಾಜೆ 48.5, ನಾಪೋಕ್ಲು 65.2, ಭಾಗಮಂಡಲ 111.2, ವಿರಾಜಪೇಟೆ ಕಸಬಾ 99, ಹುದಿಕೇರಿ 48.4, ಶ್ರೀಮಂಗಲ 46.6, ಪೊನ್ನಂಪೇಟೆ 77.2, ಅಮ್ಮತ್ತಿ 46.5, ಬಾಳೆಲೆ 45, ಸೋಮವಾರಪೇಟೆ ಕಸಬಾ 10.4, ಶನಿವಾರಸಂತೆ 14, ಶಾಂತಳ್ಳಿ 35.2, ಕೊಡ್ಲಿಪೇಟೆ 16, ಕುಶಾಲನಗರ 2.4, ಸುಂಟಿಕೊಪ್ಪ 15.2 ಮಿ.ಮೀ.ಮಳೆಯಾಗಿದೆ.

ಕೊಡು ಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ರವರ ಮೇಲೆ ಹಲ್ಲೆ ನಡೆದಿದೆ.ಕ್ಷೇತ್ರದ ಕಾಮಗಾರಿ ವೀಕ್ಷಣೆ ಮಾಡುವ ಸಂದರ್ಭ ಮಾಜಿ ಸದಸ್ಯರಾದ ಶ್ರೀನಿವಾಸ ಮತ್ತು ರವಿ ಭಾಸ್ಕರ್ ನಾಯಕ್ ರವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಕೈ ಗಾಯಗೊಳಿಸಿದ್ದು,ಸದ್ಯ ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಹಳೇ ದ್ವೇಶವೇ ಕಾರಣ ಎನ್ನಲಾಗಿದೆ. ಕುಶಾಲನಗರ ಪೊಲೀಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಾಪುರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಸರಕಾರಿ ಆಸ್ಪತ್ರೆಯ ಮಾಳಿಗೆ ಸೋರುತ್ತಿದೆ. ವರ್ಷ ಕಳೆಯುವುದರೊಳಗೆ ಕಾಮಗಾರಿಯ ಸೋರಿಕೆ ಎದ್ದು ಕಾಣುವುದಕ್ಕೆ ಆಸ್ಪತ್ರೆಯಲ್ಲಿ ಮಳೆನೀರು ತಡೆಯುವುದಕ್ಕೆ ಅಲ್ಲಲ್ಲಿ ಕಂಡು ಬರುವ ಬಕೆಟ್ ಗಳು ಸಾಕ್ಷಿ ಹೇಳುತ್ತಿವೆ.

ಶನಿವಾರಸಂತೆ ಸುತ್ತಮುತ್ತ ವಾಹನ ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುಳುಗಳಲೆಯ ಜೀವನ್,ಯಸಳೂರಿನ ಯಾಜ್,ಹೊಸೂರಿನ ರಿಯಾಜ್ ರನ್ನು ಬಂದಿಸಿ,ಮಾರುತಿ800,2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!