ಕೊಡಗು Quick RoundUp

ಜಿಲ್ಲಾಡಳಿತದಿಂದ ಹೆದ್ದಾರಿಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಭಂದ ಹಾಕಿರುವ ಬೆನ್ನಲ್ಲೇ ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು,ಹಾಲು ಪೂರೈಕೆ ವಾಹನಗಳು,ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನಗಳು,ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ನಿರ್ಬಂಧದಿಂದ ವಿನಾಯಿತಿ ನೀಡಿದ್ದಾರೆ.

ಕಾಡುಕುರಿಯ ಎರಡು ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವಿರಾಜಪೇಟೆಯ ಕದನೂರು ನಿವಾಸಿ ಕೆ.ಎಂ ಜೋಯಪ್ಪ ಬಂಧಿತ ಎಂಬಾತನನ್ನು ಬಂಧಿಸಿ, ಬಂಧಿತನಿಂದ ಕುರಿಯ 2 ಒಣಗಿದ ಚರ್ಮಗಳನ್ನು ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೋಮವಾರಪೇಟೆಯ ಕರ್ಕಳ್ಳಿಯ‌‌ ಬಾಣೆಯಲ್ಲಿ ಯುವಕರ ತಂಡವೊಂದು ಜೂಜು ಆಡುತ್ತಿದ್ದ ವೇಳೆ ಖಚಿತ ಮಾಹಿತಿ ದೊರೆತು ದಾಳಿ ನಡೆದಿದ್ದು, ಪೊಲೀಸರು ಆಗಮಿಸುತ್ತಿದ್ದಂತೆ ತಂಡ ಕಾಲ್ಕಿತ್ತಿದೆ.

ಕುಶಾಲನಗರ ಸಮೀಪದ ಮೀನುಕೊಲ್ಲಿಯಲ್ಲಿನ ಕಾಫಿ ತೋಟವೊಂದರಲ್ಲಿ ಅಕ್ರಮ ಬೀಟೆ ಮರ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ದಾಳಿ ಮಾಡಿದ್ದು, 2.5 ಲಕ್ಷ ಮೌಲ್ಯದ 15 ಬೀಟೆ ನಾಟವನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಸಿಎಸ್‍ಆರ್ (ಸಾಂಸ್ಥಿಕ ಜವಾಬ್ದಾರಿ) ಅಡಿಯಲ್ಲಿ, ಸುಮಾರು 1.93 ಲಕ್ಷ ವೆಚ್ಚದಲ್ಲಿ 230 ಬಡ ಕುಟುಂಬಗಳಿಗೆ ಮಡಿಕೇರಿಯ ಪ್ರಾದೇಶಿಕ ಕಚೇರಿಯ ಅಧೀನದಲ್ಲಿ ಬರುವ 31 ಶಾಖೆಗಳ ಮೂಲಕ ದಿನಸಿ ಪದಾರ್ಥ ಮತ್ತು ಔಷಧಿ ಕಿಟ್ ವಿತರಿಸುವ ಮೂಲಕ ನೆರವು ಹಸ್ತವನ್ನು ಚಾಚಿದೆ.

ಐಟಿಡಿಪಿ ವತಿಯಿಂದ ಹಾಡಿ ವಾಸಿಗಳಿಗೆ ನೀಡಲಾಗುತ್ತಿದ್ದ ಮೊಟ್ಟೆಗಳು ಕೊಳೆತಿರುವುದು ಬೆಳಕಿಗೆ ಬರುತ್ತಿದ್ದಂತೆ,ಪರಿಶೀಲನೆ ನಡೆಸಿದ ಇಲಾಖೆ ಪರ್ಯಾವಾಗಿ ಉತ್ತಮ ಗುಣಮಟ್ಟದ 32 ಮೊಟ್ಟೆಗಳನ್ನು ಸರಬರಾಜು ಮಾಡಲಾಗಿದ್ದು,ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.

ಕೊವಿಡ್ ಮತ್ತು ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಪರಸ್ಥಿತಿ ನಡುವೆಯೂ ಕೊಡಗಿನ ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿಸದಿದ್ದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ತಿಳಿಸುವುದಿಲ್ಲ ಮತ್ತು ಟಿಸಿ ನೀಡಲಾಗುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ ಎಂದು ಪೋಷಕರಿಂದ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು ಒಟ್ಟು 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಚಟುವಟಿಕೆ ಚುರುಕಾಗಿದ್ದು ಸಸಿಮಡಿ ಕಾರ್ಯದ ಸಿದ್ದತೆ ನಡೆಯುತ್ತಿದೆ.

error: Content is protected !!