ಕೊಡಗು Quick RoundUp


ಕೇಂದ್ರ ಮತ್ತು ರಾಜ್ಯ ಸರಕಾರದ ಕುಟ್ಟ ವಲಯ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಗಡಿಭಾಗ ಕುಟ್ಟ ಗ್ರಾಮದ ಹೆಚ್ ಪಿ ಪೆಟ್ರೋಲಿಯಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-1ನೇ ಗ್ರಾಮದಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ 16ರ ಮಧ್ಯಾಹ್ನ 1 ಗಂಟೆಯಿಂದ ಜೂನ್ 24ರ ಸಂಜೆ 6 ಗಂಟೆಯವರೆಗೆ ನರಿಯಂದಡ-1 ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದ್ದು ಸಾರ್ವಜನಿಕರು ಸಹಕರಿಸಲು ಪಿಡಿಒ ಕೋರಿದ್ದಾರೆ.

ಮಾಲ್ದಾರೆ ಸಮೀಪ ಐಟಿಡಿಪಿ ವತಿಯಿಂದ ಆದಿವಾಸಿಗಳಿಗೆ ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತಿದೆ,ಈ ಬಗ್ಗೆ ದೂರು ಕೇಳಲು ಬಂದ ಸಂಬಂಧ ಅಧಿಕಾರಿಗಳ ಮುಂದೆಯೇ ಕೊಳೆತ ಮೊಟ್ಟೆ ಪ್ರದರ್ಶಿಸಿ ಹಾಡಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್-19 ಪಾಸಿಟಿವ್ ಪ್ರಕರಣಗಳು ನಿಯಂತ್ರಣಕ್ಕೆ ಬಾರದೆ ಸೊಂಕಿತರು ಹೆಚ್ಚಾಗುತ್ತಿರುವ ಹಿನ್ನಲೆ ವಿರಾಜಪೇಟೆ ಹಾಗೂ ಫೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು 2ನೇ ಬಾರಿಗೆ ಭೇಟಿ ನೀಡಿ ಮತ್ತೊಮ್ಮೆ ಪಂಚಾಯತಿ ಟಾಸ್ಕ್ ಸಭೆಯನ್ನು ಸೋಮವಾರ ನಡೆಸಿದರು.

ಮಳೆಗಾಲ ಆರಂಭವಾಗಿರುವುದರಿಂದ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಮಣ್ಣಿನ ಉಂಡೆ ತಯಾರಿ ಕಾಡಿಗೆ ಎಸೆಯುವ ಮೂಲಕ ಪರಿಸರಪ್ರೇಮಿ ಗಣೇಶ್ ಅವರು ಅರಣ್ಯ ಅಭಿವೃದ್ಧಿಮಾಡುತ್ತಿದ್ದಾರೆ…

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಕಾಂಗ್ರೇಸ್ ಕೇಕ್ ಕತ್ತರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ವಿರಾಜಪೇಟೆ ತಾಲ್ಲೂಕಿನ ಅರ್ವತೋಕ್ಲುವಿನ ಪಂಚಾಯ್ತಿ ವ್ಯಾಪ್ತಿಯ ಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯ ಚುರುಕುಗೊಂಡಿದೆ.


ಕೊಡ್ಲಿಪೇಟೆಯ ಕಲ್ಕೆರೆ ಗ್ರಾಮದಲ್ಲಿ,ಸಬಂಧಿಕರಿದ್ದರೂ ಬಸ್ ತಂಗುದಾಣದಲ್ಲಿ ಮಲಗುತ್ತಿದ್ದ 70 ವರ್ಷದ ವೃದ್ಧೆಯನ್ನು ಸಮಾಜ ಸೇವಕ ಆಸಫ್ ಮತ್ತು ತಂಡ ಮಡಿಕೇರಿ ತನಲ್ ಆಶ್ರಮಕ್ಕೆ ಸೇರಿಸಿದರು.

ಹಲವು ಗ್ರಾಮಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ,ಹೆಚ್ಚಾಗಿ ಕಾರ್ಮಿಕ ವರ್ಗ ಸೇರಿದ್ದಾರೆ ತೋಟದ ಮಾಲೀಕರು ನಿಗಾವಹಿಸುವಂತೆ ಕೆಜಿಬಿ ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ಹೋಟೆಲ್ ಕಾರ್ಮಿಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಯೋಜನೆಯಡಿ ರೂ.3000/- ಗಳನ್ನು ನೀಡಲು ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಲಿದೆ ಎಂದು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ತಿಳಿಸಿದ್ದಾರೆ.