fbpx

ಕೊಡಗು Quick RoundUp

1.ಇಂದು ಲಸಿಕಾ ಶಿಬಿರ ಇಲ್ಲ

ಕೊಡಗು ಜಿಲ್ಲೆಗೆ ಕೋವಿಡ್ ಲಸಿಕೆ ಸರಬರಾಜು ಆಗದ ಹಿನ್ನೆಲೆ ಜುಲೈ, 15 ರಂದು ಜಿಲ್ಲೆಯ ಯಾವುದೇ ಕೇಂದ್ರದಲ್ಲಿ ಲಸಿಕಾ ಶಿಬಿರ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋರಿದ್ದಾರೆ.

2.ಇಂದು ಸಂತೆ ರದ್ದು

ಮೂರ್ನಾಡುವಿನಲ್ಲಿ ಕೋವಿಡ್ ಹೆಚ್ಚಳ ಗುರುವಾರ ನಡೆಯುವ ವಾರದ ಸಂತೆ ರದ್ದು ಮಾಡುವಂತೆ ಮೂರ್ನಾಡು ಗ್ರಾ.ಪಂಚಾಯ್ತಿ ಆದೇಶಿದೆ.

3.ಕುಮಾರಧಾರ ಭರ್ತಿ

ಪಶ್ಚಿಮ ಘಟ್ಟದ ಪುಷ್ಪಗಿರಿ ವನ್ಯಧಾಮದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ಕುಕ್ಕೆ ಸುಬ್ರಮಣ್ಯದ ಕಿಂಡಿ ಅಣೆಕಟ್ಟಿನ ನೀರಿನ ಏರಿಕೆ ಉಂಟಾಗಿದ್ದು ಪವಿತ್ರ ಸ್ನಾನಕ್ಕೆ ಇಳಿಯದಿರುವಂತೆ ನಿರ್ಭಂಧಿಸಲಾಗಿದೆ.

4.ಪಯಸ್ವಿನಿಯತ್ತ ಪ್ರವಾಹ

ಜಿಲ್ಲೆಯಲ್ಲಿ ಕಾವೇರಿ,ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದರೆ ಇತ್ತ ಕೊಯ್ನೋಡು, ಜೋಡುಪಾಲ, ಮದೆನಾಡಿನ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಸುಳ್ಯದ ಪಯಸ್ವಿನಿಯತ್ತ ಪ್ರವಾಹ ಏರ್ಪಟ್ಟು,ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

5.ಕಾಡು ತೆರವು

ಹಳ್ಳಿಗಟ್ಟು ಕುಂದ ಜಂಕ್ಷನ್ ನಿಂದ ಭದ್ರಕಾಳಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಎರಡು ಬದಿಯಲ್ಲಿ ಕಾಡು ಬೆಳೆದಿದ್ದು ರಸ್ತೆಯಲ್ಲಿ ವಾಹನಗಳು ಚಲಿಸಲು ತೊಂದರೆಯಾಗುತ್ತಿರುವುದನ್ನು ಮನಗಂಡ ಹಳ್ಳಿಗಟ್ಟು ಬೂತ್ ಅಧ್ಯಕ್ಷರಾದ ಸಣ್ಣುವಂಡ ವಿನು ಭೋಪಯ್ಯನವರು ಇದನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ಗುಮ್ಮಟ್ಟೀರ ಕಿಲನ್ ಗಣಪತಿ ಯವರ ಗಮನಕ್ಕೆ ತಂದಿರುತ್ತಾರೆ. ಕಿಲನ್ ಗಣಪತಿಯವರು ಪೂರ್ಣ ಸಹಕಾರದೊಂದಿಗೆ ಜೆಸಿಬಿಯನ್ನು ಕಳಿಸಿ ಕೊಡುವುದರ ಮೂಲಕ ಅಂದಾಜು ಒಂದು ಕಿಲೋಮೀಟರ್ ರಸ್ತೆಯ ಎರಡೂ ಬದಿಯ ಕಾಡು ಬೆಳೆದಿರುವುದನ್ನು ಸ್ವಚ್ಛಗೊಳಿಸಲಾಯಿತು.

6.ಲಸಿಕೆ ವಿತರಣೆ

ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇನ್ನೂರ ಮೂವತ್ತು ಜನರಿಗೆ ಕೋವಿಶೀಲ್ಡ್ ಲಸಿಕೆಯನ್ನು ಕೊಡಲಾಯಿತು ಮಾನ್ಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ.ಜಿ ಬೋಪಯ್ಯನವರ ಸಹಕಾರದಿಂದ ಮತ್ತು ಜಿಲ್ಲಾಡಳಿತದ ಸಹಕಾರದಿಂದ ಇಂದು ಶ್ರಿಮಂಗಲದ ಕುರ್ಚಿ ಗ್ರಾಮದಲ್ಲಿ ಕೊವೀಶೀಲ್ಡ್ ಚುಚ್ಚುಮದ್ದು ಕೊಡಲಾಯಿತು. ಇಂದಿನ ಲಸಿಕ ಕಾರ್ಯಕ್ರಮದಲ್ಲಿ ಇನ್ನು ಮೊದಲ ಲಸಿಕೆ ತೆಗೆಯದ 45 ವರ್ಷ ಮೇಲ್ಪಟ್ಟವರಿಗೆ, ಮೊದಲ ಚುಚ್ಚುಮದ್ದು ಹಾಕಿಸಿಕೊಂಡು 84 ದಿವಸ ಆದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮೊದಲ ಚುಚ್ಚುಮದ್ದು ಕೊಡಲಾಯಿತು.

7.ಟನ್ ಗಟ್ಟಲೆ ತ್ಯಾಜ್ಯ

ಕೊರೋನಾ ಸಂದರ್ಭ ವಿರಾಜಪೇಟೆ ತಾಲ್ಲೂಕು ಸುತ್ತಮುತ್ತ ತ್ಯಾಜ್ಯ ಸಂಗ್ರಹಿಯಿಸುವ ಕಾರ್ಯ ನಡೆಸಿದ್ದು,ಗೋಣಿಕೊಪ್ಪದಲ್ಲಿ 4 ಟನ್ ತ್ಯಾಜ್ಯವನ್ನು ಮರುಉತ್ಪಾಧನೆಗೆ ಕಳುಹಿಸಿಕೊಡಲಾಯಿತು.

8.ಅಧಿಕಾರ ಸ್ವೀಕಾರ

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಕೊಟ್ಟಮುಡಿಯ ಹೆಚ್.ಎ ಹಂಸ ಅವಿರೋಧ ಅವರನ್ನು ಕೆಪಿಸಿಸಿ ಅವಿರೋಧ ಆಯ್ಕೆಮಾಡಿದ್ದು ಡಿಸಿಸಿ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರಿಗೆ ಆದೇಶ ಪತ್ರ ಹಸ್ತಾಂತರಿಸಿದರು.

9.ಕಾರಿನ ಮೇಲೆ ಮರ,ಜಖಂ

ಕೋವರ್ ಕೊಲ್ಲಿಯಲ್ಲಿ ರಸ್ತೆಬದಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದಿದ್ದು ಜಖಂಗೊಂಡಿದೆ.

10.ಫೋಟೋಗ್ರಾಫಿ ಸ್ಪರ್ಧೆ

ಕರ್ನಾಟಕ ಪ್ರವಾಸೋದ್ಯಮ ಛಾಯಾಗ್ರಾಹಕರಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದ್ದು, ವಿಷಯಗಳು ಇಂತಿದೆ.

11.ಸಮಾಜ ಸೇವೆಗೆ ಮನವಿ

ಪ್ರಾಕೃತಿ ವಿಕೋಪ ಸಂದರ್ಭ ತುರ್ತು ಸೇವೆಯನ್ನು ಒದಗಿಸಲು ಎಸ್ ವೈ ಎಸ್ ಆಮಿಲಾ ಟಾಸ್ಕ್ ಫೋರ್ಸ್ ತಂಡ ರಚನೆಯಾಗಿದ್ದು,ತಮಗೆ ಸ್ವಯಂಸೇವೆ ಮಾಡಲು ಅನುಮತಿ ನೀಡುವಂತೆ ತಂಡದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಮನವಿ ಸಲ್ಲಿಸಿದರು.

12.ಶಾಲಾ ದಾಖಲಾತಿ ಆರಂಭ

ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ, ಮೈಸೂರು ಇಲ್ಲಿ 2021-22ನೇ ಸಾಲಿಗೆ 06 ರಿಂದ 14 ವರ್ಷ ವಯೋಮಿತಿಯ ಅಂಧ ಗಂಡು ಮಕ್ಕಳಿಗೆ ಒಂದನೇ ತರಗತಿಯಿಂದ 10 ನೇ ತರಗತಿವರೆಗೆ ಶಾಲಾ ದಾಖಲಾತಿ ಪ್ರಾರಂಭವಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯೋಗ ಮೆಡಿಟೇಷನ್, ದೈಹಿಕ ಶಿಕ್ಷಣ, ಸಂಗೀತ ಡ್ಯಾನ್ಸ್, ಡ್ರಾಮ, ಛಲನ ತರಬೇತಿ, ಕಪ್ಯೂಟರ್ ತರಬೇತಿ, ಸೇವೆ ತರಬೇತಿಗಳನ್ನು ನುರಿತ ವಿಶೇಷ ಶಿಕ್ಷಕರಿಂದ ನೀಡುವುದರ ಜೊತೆಗೆ ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಉಚಿತವಾಗಿ ಊಟ, ವಸತಿ, ಪುಸ್ತಕಗಳು, ಶಾಲಾ ಸಮವಸ್ತ್ರ, ಕಲಿಕಾ ಉಪಕರಣಗಳು, ವೈದ್ಯಕೀಯ ಮತ್ತು ಇತರೆ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಹಾಗೂ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಈ ಸರ್ಕಾರಿ ಪಾಠಶಾಲೆಗೆ ಜಿಲ್ಲೆಯ 06 ರಿಂದ 14 ವರ್ಷ ವಯೋಮಿತಿಯ ಅಂಧ ಗಂಡು ಮಕ್ಕಳು ಸೇರಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಇಲಾಖೆ ಪ್ರಕಟಣೆ ತಿಳಿಸಿದೆ.

13.ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಗಮನ ಹರಿಸಿ

ಜಿಲ್ಲೆಯಲ್ಲಿ ತೀವ್ರ ಮತ್ತು ಸಾಧಾರಣ ಅಪೌಷ್ಠಿಕ ಮಕ್ಕಳ ಸುಧಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕ 25 ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳು 295 ಇದ್ದು, ಈ ಸಂಬಂಧ ಮಕ್ಕಳ ಅಪೌಷ್ಠಿಕತೆ ಸುಧಾರಣೆ ಮಾಡುವಲ್ಲಿ ತುರ್ತು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

14. ಕೊಡಗು ರಕ್ಷಣಾ ವೇದಿಕೆ ಹೆಲ್ಪ್ ಲೈನ್

ಕೊಡಗಿನಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮಳೆ, ಗಾಳಿ, ಪ್ರವಾಹದ ಸಂದರ್ಭಗಳಲ್ಲಿ ಕೊಡಗಿನ ಬಂಧುಗಳ ನೆರವಿಗೆ ಬರಲು ಸರ್ವ ಸುಸಜ್ಜಿತ ಕಾರ್ಯಕರ್ತರ ಪಡೆಯನ್ನು ಕೊಡಗು ರಕ್ಷಣಾ ವೇದಿಕೆ ಕೊಡಗಿನಾದ್ಯಂತ ಸೇವೆಗೆ ಅಣಿಗೊಳಿಸಿದೆ. ಕೊಡಗಿನ ಯಾವುದೇ ಭಾಗದಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತಡೆಯಾಗಿದ್ದರೆ, ಎಲ್ಲಿಯಾದರೂ ಹೊಳೆ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾದರೆ ನಮ್ಮ ಕಾರ್ಯಕರ್ತರು ಪರಿಣಿತ ಈಜು ತಜ್ಞರು , ಬೋಟ್, ಜೀವರಕ್ಷಣಾ ಸಾಧನಗಳ ಸಮೇತ ಆ ಸ್ಥಳಕ್ಕೆ ತಲುಪಲಿದ್ದಾರೆ. ಯಾವುದೇ ರೀತಿಯ ಮಳೆ ಸಂಬಂಧಿತ ಸಮಸ್ಯೆಗಳ ನೆರವಿಗೆ ನಮಗೆ ಕರೆ ಮಾಡಿ. ನಮ್ಮ ವಾರ್ ರೂಮ್ 24/7 ಹೆಲ್ಪ್ ಲೈನ್ ಸಂಖ್ಯೆ ಕೆಳಗಿನಂತಿದೆ_
904-905-0-905

15. ಭಾರತೀಯ ಸೇನೆಗೆ ಆಯ್ಕೆ

ಭಾರತೀಯ ಸೇನೆಯ ಕಮಿಷನ್ಡ್ ಪದವಿಗೆ ಇತ್ತೀಚೆಗೆ ನಡೆದ ಆಯ್ಕೆ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದು ಭಾರತೀಯ ಸೇನೆಗೆ ಕೃತಿಕಾ ಆಯ್ಕೆಯಾಗಿರುತ್ತಾಳೆ.
2018ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡಿನಲ್ಲಿ ಕರ್ನಾಟಕ ಗೋವ ಡೈರೆಕ್ಟರೇಟ್‌ನಿಂದ ಎನ್‌ಸಿ‌ಸಿ ಸೀನಿಯರ್ ವಿಭಾಗದಲ್ಲಿ ಪಾಲ್ಗೊಂಡು ಬೆಸ್ಟ್ ಕೆಡೆಟ್ ಆಗಿ ಹೊರಹೊಮ್ಮಿದ್ದಾರೆ.
ಇವರು ವಿಯೆಟ್ನಾಮ್ ದೇಶಕ್ಕೆ ಭಾರತೀಯ ಎ‌ನ್‌ಸಿಸಿಯ ರಾಯಭಾರಿಯಾಗಿಯೂ ಪಾಲ್ಗೊಂಡಿದ್ದರು. ಬೆಂಗಳೂರಿನ RV ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿಯಾಗಿದ್ದರು.

error: Content is protected !!