ಕೊಡಗು Quick RoundUp

1.ಗ್ರಂಥಾಲಯದಲ್ಲಿ ಆನ್ ಲೈನ್ ಕ್ಲಾಸ್

ಮನೆಯ ಬಳಿ ಆನ್ ಲೈನ್ ಕ್ಲಾಸ್ ಎದುರಿಸಲು ನೆಟ್ವರ್ಕ್ ಸಮಸ್ಯೆ ಎದುರಾಗಿದ್ದ ಹಿನ್ನಲೆಯಲ್ಲಿ ತನ್ನ ಗ್ರಾಮದ ಗ್ರಂಥಾಲಯವನ್ನು ವಿದ್ಯಾರ್ಥಿನಿಯೊಬ್ಬಳು ಕಲಿಕೆಗೆ ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡಿದ್ದಾಳೆ.ಮರಗೋಡಿನ ಸ್ದಳೀಯ ಪಂಚಾಯ್ತಿ ಆಡಳಿತ,ಗ್ರಂಥಾಲಯದ ಮೇಲ್ವಿಚಾರಕರು ಕಟ್ಟೆಮಾಡುವಿನ ವಿದ್ಯಾರ್ಥಿನಿ ಕಾಮ್ಯ ಎಂ ಗಣಪತಿ ಎಂಬುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ.

2.ಹೈಕೋರ್ಟ್ ನಿಂದ ಕೊಡಗಿನವರಿಗೆ ಬಂದೂಕು ಹಕ್ಕು ವಿಸ್ತರಣೆ

ಬ್ರಿಟೀಷರ ಕಾಲದಿಂದ ಅಸ್ತಿತ್ವಕ್ಕೆ ಬಂದಿರುವ ಬಂದೂಕಿನ ಹಕ್ಕು ಕೊಡವ ಮತ್ತು ಜಮ್ಮ ಹಿಡುವಳಿದಾರರಿಗೆ 2029ರ ವರೆಗೆ ಹೈಕೋರ್ಟ್ ವಿಸ್ಥರಿಸಿದೆ.
ಪಿಸ್ತೋಲ್,ರಿವಾಲ್ವರ್,ಡಬಲ್ ಬ್ಯಾರಲ್ ಗನ್ ಗಳಿಗೆ,ಇದು ಅನ್ವಯವಾಗಲಿದ್ದು,ಕೊಡಗಿನ ಜನತೆ ಆತ್ಮ ರಕ್ಷಣೆ ಮತ್ತು ಆಚಾರ ಪರಂಪರೆಗಳಿಗೆ ಬಳಸಬಹುದಾಗಿದೆ.

3.ಫಲಿತಾಂಶ ಪರೀಕ್ಷಿಸಿಕೊಳ್ಳಲು ಸೂಚನೆ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20 ರಂದು ಪ್ರಕಟವಾಡಲಿದ್ದು ,SSLC ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಸಮೀಕರಿಸಿ ಫಲಿತಾಂಶ ಗಳನ್ನು ಪರಿಶೀಲಿಸಿಕೊಳಲು ಪಧವಿಪೂರ್ವ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

4.ಝಿಕಾ ವೈರಸ್,ಪತ್ತೆ

ಕೊರೋನಾ ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನುವಾಗಲೇ ವಿಚಿತ್ರವಾದ ಝಿಕಾ ವೈರಸ್ ಕೇರಳದ ಗರ್ಭಿಣಿ ಹೆಂಗಸಿನಲ್ಲಿ ಪತ್ತೆಯಾಗಿದ್ದು ಇದೇ ರೀತಿ 14 ಪ್ರಕರಣ ದಾಖಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದು ಕೊಡಗಿನವರು ಎಚ್ಚೆತ್ತುಕೊಳ್ಳಬೇಕಾಗಿದೆ.

5.ಪ್ರವಾಸೋದ್ಯಮ ಬೇಡ

ಸರ್ಕಾರದ ಮೇಲ್ಮಟ್ಟದಿಂದ ಕೊಡಗನ್ನು ಅನ್ಲಾಕ್ ಮಾಡಲು ಆದೇಶ ಬಂದಿದ್ದರೂ ಜಿಲ್ಲಾಧಿಕಾರಿಗಳು ಕೊಡಗಿನ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಯ ಹಿತದೃಷ್ಟಿಯಿಂದ ಕರೋನ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಯಾವುದೇ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಕೊಡಗಿನ ಪ್ರಜ್ಞಾವಂತ ನಾಗರಿಕರ ಪರವಾಗಿ ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.

6.ತಿತಿಮತಿ ಅರಣ್ಯ ಇಲಾಖೆಗೆ ಬಿದಿರು ಬೀಜ ವಿತರಣೆ

ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ಇಂದು ತಿತಿಮತಿ ಸಮೀಪ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ವಲಯಾರಣ್ಯಾಧಿಕಾರಿ ವೈ.ಕೆ.ಕಿರಣ್‌ಕುಮಾರ್ ಅವರಿಗೆ ಸಂಸ್ಥೆಯ ಅಧ್ಯಕ್ಷೆ ಟಿ.ಎಂ.ನೀತಾ ಕಾವೇರಮ್ಮ ಸ್ಥಳೀಯ ನಾಟಿ ತಳಿ ಬಿದಿರಿನ ಬೀಜವನ್ನು ವಿತರಿಸಿದರು.
ಪ್ರತೀ ಕೆ.ಜಿ. ಬಿದಿರಿನ ಬೀಜದಲ್ಲಿ ಸುಮಾರು ೬೦೦೦ ಬಿದಿರು ಸಸ್ಯಗಳನ್ನು ಬೆಳೆಸಬಹುದಾಗಿದ್ದು, ೩ ಕೆ.ಜಿ.ಬಿದಿರಿನ ಬೀಜ ವಿತರಿಸಲಾಗಿದೆ ನಾಗರಹೊಳೆ ಅಭಯಾರಣ್ಯದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಿದಿರು ವಿನಾಶದ ಅಂಚಿನಲ್ಲಿದ್ದು, ಕಾಡ್ಗಿಚ್ಚಿನ ದುಷ್ಪರಿಣಾಮದಿಂದಾಗಿಯೂ ಬಿದಿರು ಮೆಳೆ ನಾಶವಾಗಿದ್ದು, ಕಾಡಾನೆಗಳ ಮೇವಿಗೆ ಕೊರತೆಯಾಗಿದೆ. ಈ ನಿಟ್ಟಿನಲ್ಲಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಸೂಕ್ತ ಆಹಾರ ಸಿಗುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.

7.ಅಣುಕು ಪರೀಕ್ಷೆ

ಈ ಬಾರಿಯ SSLC ಪರೀಕ್ಷಾ ಪ್ರಕ್ರಿಯೆಯಲ್ಲಿ ಇದೇ 15 ಮತ್ತು 17 ರಂದು ಆಯಾ ಪರಿಕ್ಷಾ ಕೇಂದ್ರಗಳಲ್ಲಿ ಅಣುಕು ಪರೀಕ್ಷೆಗಳು ನಡೆಸಲಾಗುವುದೆಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

8.ನೋಟರಿ ಹುದ್ದೆಗೆ ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲ್ಲೂಕಿನಲ್ಲಿ ಖಾಲಿ ಇರುವ 01 ನೋಟರಿ ಹುದ್ದೆಯನ್ನು ಭರ್ತಿ ಮಾಡಲು ನೋಟರಿ ನಿಯಮಗಳು 1956 ರ ನಿಯಮ 3 ರಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್, 07 ಕೊನೆಯ ದಿನವಾಗಿದೆ. ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು.
ನೋಟರಿ ನಿಯಮಗಳು 1956 ರ ನಿಯಮ 3 ರ ನಿಬಂಧನೆಗಳಂತೆ ಅರ್ಹವಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಫಾರಂ 1 (ರೂಲ್4(2)) ರನ್ವಯ ಅರ್ಜಿದಾರರು ವಿವರಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆ ಪ್ರತಿಗಳೊಂದಿಗೆ ದ್ವಿಪ್ರತಿಯಲ್ಲಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು.

9.ಚಿತ್ರಕಲಾ ಸ್ಪರ್ಧೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕೊಡವರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸುವ ನೃತ್ಯಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ಚಿತ್ರಕಲಾ ಸ್ವರ್ಧೆಯನ್ನು ಏರ್ಪಡಿಸಲಾಗಿದೆ.
ಉತ್ತಮ ಗುಣಮಟ್ಟದ ಎ4 ಅಥವಾ ಎ3 ಅಳತೆಯ ಡ್ರಾಯಿಂಗ್ ಪೇಪರ್‍ನಲ್ಲಿ ಚಿತ್ರ ಬಿಡಿಸಿ ಕಳುಹಿಸಬಹುದು. ಈ ಸ್ಫರ್ಧೆಗೆ 2 ವಿಭಾಗ ಅಂದರೆ ಪ್ರೌಢಶಾಲೆ ಮಕ್ಕಳು (5 ರಿಂದ 10 ನೇ ತರಗತಿ) (1ನೇ ವಿಭಾಗ) ಹಾಗೂ ಕಾಲೇಜು ವಿದ್ಯಾರ್ಥಿ(ಪಿ.ಯು.ಸಿ ಯಿಂದ ಸ್ನಾತಕೋತ್ತರ) (2ನೇ ವಿಭಾಗ) ಗಳು ಈ ಸ್ವರ್ಧೆಯಲ್ಲಿ ಭಾಗವಹಿಸಬಹುದು.
ಕೊಡವರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸುವ ನೃತ್ಯಗಳಲ್ಲಿ ಯಾವುದಾದರೂ ಒಂದು ಪ್ರಕಾರದ ಚಿತ್ರವನ್ನು ಬಿಡಿಸಿ ಕಳುಹಿಸಿಕೊಡಬೇಕು. ಚಿತ್ರ ಬಿಡಿಸುವವರು ಆಯಿಲ್ ಪೇಸ್ಟಲ್, ಕಲರ್ ಪೆನ್ಸಿಲ್ , ಪೋಸ್ಟರ್ ಕಲರ್ ಅಥವಾ ಅಕ್ರಲಿಕ್ ಕಲರ್‍ನಲ್ಲಿ ಬಿಡಿಸಿ ಕಳುಹಿಸಬೇಕು. ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಪತ್ರ ಮತ್ತು ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವುದು.

10.ರಾಮಪ್ಪರಿಂದ ಶ್ರೇಷ್ಠದಾನ

ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಮುಖ್ಯ ಆರಕ್ಷಕರಾಗಿರುವ ಬಿ.ಎಂ.ರಾಮಪ್ಪ ತಮ್ಮ 41 ನೇ ಬಾರಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವ್ಯಕ್ತಿಯೋರ್ವರಿಗೆ ತುರಿತು ರಕ್ತ ಬೇಕಾಗಿದ್ದ ಹಿನ್ನಲೆ ಸ್ಪಂಧಿಸಿ ಅಮೂಲ್ಯ ರಕ್ತ ದಾನ ಮಾಡಿದ್ದಾರೆ.

11.ಆಧಾರ್ ತಿದ್ದುಪಡಿ

ಸರ್ಕಾರದಿಂದ ಲಭ್ಯವಾಗವ ಪ್ರತಿಯೊಂದು ಸೌಲಭ್ಯಕ್ಕೆ ಆಧಾರ್ ಕಾರ್ಡ್ ಅವಶ್ಯಕತೆಯಿರುವುದರಿಂದ ಮೊದಲ ಹಂತದ ಆಧಾರ್ ತಿದ್ದುಪಡಿ ಮತ್ತು ನೊಂದಣಿ ಕಾರ್ಯ ಆರಂಭಿಸಿದೆ‌. ಜೊತೆಗೆ ಇತರೆ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಪಡೆದುಕೊಳ್ಳಬಹುದಾಗಿದೆ.

12.ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಕಟ

ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗ ನೀಡುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಮೀಸಲಾತಿ ಹೊರಡಿಸಿದ್ದು ಗ್ರೂಪ್ ಎ ನಿಂದ ಗ್ರೂಪ್ ಡಿ ವರೆಗಿನ ಹುದ್ದೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇಖಡಾ 1 ರಷ್ಟು ಮೀಸಲಾತಿ ನೀಡಲು ಆದೇಶಿಸಿದೆ.

error: Content is protected !!