fbpx

ಕೊಡಗು Quick Roundup

1.ನಮಗೂ ಜೀವನವಿದೆ ಅವಕಾಶ ನೀಡಿ

ಜಿಲ್ಲೆಯಲ್ಲಿ ಅನ್ ಲಾಕ್ ನಿಯಮದಿಂದ ಕೆಲವು ಅಂಗಡಿ ಮುಂಗಟ್ಟುಗಳಿಗೆ ಅವಕಾಶಗಳಿಗೆ ಮಾತ್ರ ಸೀಮಿತಗೊಳಿಸಿದ ಹಿನ್ನಲೆಯಲ್ಲಿ
ಎಲ್ಲಾ ವ್ಯಾಪಾರಕೆ ಅವಕಾಶ ಕೊಡಿ ಮೇಡಮ್ ಮೊಬೈಲ್, ಫ್ಯಾನ್ಸಿ, ಸ್ಟುಡಿಯೋ, ಇಲೆಕ್ಟ್ರಾನಿಕ್ ಇತರ ಬೇರೆ ಬೇರೆ ಅಂಗಡಿಯವರ ಗತಿಯೇನು ಸರ್ 3 ತಿಂಗಳು ಕ್ಲೋಸ್ ಮಾಡೋದು, ಲೋನ್, ರೆಂಟ್, emi ಎಲ್ಲಾ ಹೇಗೆ ಮೇಡಮ್ ನಿಭಾಯಿಸುವುದು? ಎಂದು ವರ್ತರು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

2.ಪಿಂಡಪ್ರದಾನಕ್ಕೆ ಅವಕಾಶ

ಕೊಡಗಿನ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತದ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಯೂತ್ ವಿಂಗ್ ಮತ್ತು ಪೊಮ್ಮಕ್ಕಡ ಪರಿಷತ್ ಸ್ವಾಗತಿಸಿದೆ.
ಪಿಂಡ ಪ್ರಧಾನಕ್ಕೆ ಯಾವುದೇ ಕಾರಣಕ್ಕೂ ಮೂಲನಿವಾಸಿಗಳು ಬಿಟ್ಟು ಇತರ ಭಕ್ತಾದಿಗಳಿಗೆ ಸದ್ಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೂರು ಸಂಸ್ಥೆಗಳು ಒತ್ತಾಯಿಸಿದೆ.

3. 15 ದಿನದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯ

ಕೊಡಗಿನಲ್ಲಿ ಲಸಿಕೆ ಲಭ್ಯವಾಗಲು ವಿಳಂಭವಾಗುತ್ತಿದ್ದರೂ ಇನ್ನು 15 ದಿನಗಳಲ್ಲಿ ಜಿಲ್ಲೆಯ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ.

4.ಗಾಂಧಿ ಮೈದಾನದ ಅವಸ್ಥೆ

ರಾಜಕೀಯ ಸಮಾರಂಭವಾಗಲಿ, ದಸರವಾಗಲಿ, ಸಮಾವೇಶವಾಗಲಿ ಮಡಿಕೇರಿಯ ಗಾಂಧಿ ಮೈಧಾನ ಬೇಕು ಆದರೆ ಮಳೆಗಾಲದಲ್ಲಿ ಮಾತ್ರ ಭತ್ತದ ನಾಟಿ ಮಾಡಲಿಕ್ಕೆ ಇರುವಂತೆ ಗೋಚರಿಸುತ್ತದೆ.

5.ಹಾಡಿಗಳಲ್ಲಿ ಡ್ರೋನ್ ಸಮೀಕ್ಷೆ

ಮಾಲ್ದಾರೆ ವ್ಯಾಪ್ತಿಯಲ್ಲಿರುವ ವಿವಿಧ ಹಾಡಿಗಳ ನಿವಾಸಿಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಡ್ರೋನ್ ಮೂಲಕ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಿತು.ಪರಿಶಿಷ್ಟ ಜಾತಿ-ಪಂಗಡಗಳ ಬೆಂಗಳೂರಿನ ಇಲಾಖೆ,ವರದಿ ಸಿದ್ದಪಡಿಸಿ ಜುಲೈ 10ರಂದು ನಡೆಯುವ ಮುಖ್ಯಮಂತ್ರಿಗಳ ಇಲಾಖೆ ಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ.

6. ಹೆರಿಟೇಜ್ ಸೆಂಟರ್ ವೀಕ್ಷಣೆ

ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ನೆನೆಗುದಿಗೆ ಬಿದಿದ್ದ ಬಹುಕನಸ್ಸಿನ ಹೆರಿಟೇಜ್ ಸೆಂಟರ್ ಕಾಮಗಾರಿ ಸ್ಥಳಕ್ಕೆ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

7.ಇನ್ಸಿನೇಟರ್ ತರಬೇತಿ

ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ “ಸ್ವಚ್ಛ ಸಂಕೀರ್ಣ”ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಡೈಪರ್ ಗಳ ವೈಜ್ಞಾನಿಕ ವಿಲೇವಾರಿಗೆ ಇನ್ಸಿನೇರೇಟರ್ ಯಂತ್ರದ ಪ್ರ್ಯಾತಕ್ಷಿಕೆಯನ್ನು ಮಡಿಕೇರಿ ಮಡಿಕೇರಿ ತಾಲ್ಲೂಕು ಪಂಚಾಯ್ತಿನಲ್ಲಿ ಆಯೋಜಿಸಲಾಗಿತ್ತು.ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳಲ್ಲಿ ಈ ತರಬೇತಿ ಮುಂದುವರೆಸಲಿದೆ.

8.ಹಾಲು ವಿತರಣೆ

ಸಿದ್ಧಾಪುರದ ಪಟ್ಟಣದ ಮಾರುಕಟ್ಟೆ ರಸ್ತೆಯನ್ನು ಸೀಲ್ಡೌನ್ ಮಾಡಿರುವ ಹಿನ್ನಲೆಯಲ್ಲಿ 250ಕ್ಕೂ ಹೆಚ್ಚು ಮನೆಗಳು ಲಾಕ್ ಆಗಿರುವುದರಿಂದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹಾಲನ್ನು ಪಕ್ಷದ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ವಿತರಿಸಿದರು.

9.ಆನೆಕೆರೆ ಬಸ್ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು

ಶ್ರೀ ಡಾ.ಶಿವಕುಮಾರ್ ಸ್ವಾಮೀಜಿ ಜಯಂತೋತ್ಸವ ಸಮತಿ ವತಿಯಿಂದ ಸೋಮವಾರಪೇಟೆಯ ಆನೆಕೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು,ಪೂಜೆ ನೆರವೇರಿಸಿದ ಶಾಸಕ ಅಪಚ್ಚು ರಂಜನ್ ತನ್ನ ವೈಯುಕ್ತಿಕ ನೆರವು ನೀಡುವ ಭರವಸೆ ನೀಡಿದರು.

10. ಆಗಸ್ಟ್ 8ರಂದು ರಾಷ್ಟ್ರಮಟ್ಟದ ಜೇಸಿಸ್ ಪ್ರತಿಭಾನ್ವೇಷಣೆ ಪರೀಕ್ಷೆ-2021

‘ಜೆ.ಸಿ.ಐ. ಭಾರತ’ದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ದೇಶದಾದ್ಯಂತ ಏಕಕಾಲಕ್ಕೆ ನಡೆಸಲಾಗುವ “ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ”ಯನ್ನು (ಎನ್.ಎಲ್. ಟಿ. ಎಸ್.-2021) ಪ್ರಸಕ್ತ ವರ್ಷ ಮುಂಬರುವ ಆಗಸ್ಟ್ 8ರಂದು ಆನ್ ಲೈನ್ ಮೂಲಕ ಆಯೋಜಿಸಲಾಗಿದೆ. ಇದರ ಅಂಗವಾಗಿ ವಲಯ 14ರಲ್ಲಿರುವ ‘ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ’ ಘಟಕದ ವತಿಯಿಂದ ಈ ಬಾರಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

error: Content is protected !!